ಭಾನುವಾರ, ಜನವರಿ 26, 2020
28 °C

ಕ್ರಿಕೆಟ್‌: ನಿಖಿಲ್‌ ಅಜೇಯ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಖಿಲ್‌ ಲಾಲ್‌ (ಔಟಾಗದೆ 188) ಅವರ ಅಮೋಘ ಶತಕದ ನೆರವಿನಿಂದ ಎಂಬಸಿ ಪಬ್ಲಿಕ್‌ ಶಾಲೆ ತಂಡ ಕೆಎಸ್‌ಸಿಎ ಕಪ್‌ಗಾಗಿ ನಡೆಯುತ್ತಿರುವ 16ವರ್ಷದೊಳಗಿನವರ ಗುಂಪು–1, ಡಿವಿಷನ್‌–3ರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 226ರನ್‌ಗಳಿಂದ ವ್ಯಾಸ ಇಂಟರ್‌ನ್ಯಾಷನಲ್‌ ಸ್ಕೂಲ್‌, ಬಿ–97 ತಂಡವನ್ನು ಪರಾಭವಗೊಳಿಸಿದೆ.

26 ಓವರ್‌ಗಳಿಗೆ ನಿಗದಿಪಡಿಸಲಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಂಬಸಿ ತಂಡ 2 ವಿಕೆಟ್‌ಗೆ 294ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ವ್ಯಾಸ ತಂಡ 16.5 ಓವರ್‌ಗಳಲ್ಲಿ 68ರನ್‌ಗಳಿಗೆ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌: ಎಂಬಸಿ ಶಾಲೆ; 26 ಓವರ್‌ಗಳಲ್ಲಿ 2 ವಿಕೆಟ್‌ಗೆ 294 (ನಿಖಿಲ್‌ ಲಾಲ್‌ ಔಟಾಗದೆ 188, ವಿ. ವಿಸ್ಮೃತ್‌ 66). ವ್ಯಾಸ ಸ್ಕೂಲ್‌: 16.5 ಓವರ್‌ಗಳಲ್ಲಿ 68 (ಎಂ.ಧನುಷ್‌ 9ಕ್ಕೆ2, ಕೆ.ಪಿ.ತನ್ಮಯ್‌ 5ಕ್ಕೆ2). ಫಲಿತಾಂಶ: ಎಂಬಸಿ ಶಾಲೆಗೆ 226ರನ್‌ ಗೆಲುವು.

ವೀನಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಬಿ–10: 26 ಓವರ್‌ಗಳಲ್ಲಿ 6 ವಿಕೆಟ್‌ಗೆ 186 (ಚಿರಾಗ್‌ ಔಟಾಗದೆ 65, ಸುನೀಶ್‌ ಔಟಾಗದೆ 44; ವಿದ್ಯಾಶಂಕರ್‌ 29ಕ್ಕೆ2). ಸಿಲಿಕಾನ್‌ ಸಿಟಿ: 19.4 ಓವರ್‌ಗಳಲ್ಲಿ 84 (ಶ್ರವಣ್‌ 22ಕ್ಕೆ6, ಹಿತೇಶ್‌ 15ಕ್ಕೆ2). ಫಲಿತಾಂಶ: ವೀನಸ್‌ ಶಾಲೆಗೆ 102ರನ್‌ ಗೆಲುವು.

ನ್ಯಾಷನಲ್‌ ಪಬ್ಲಿಕ್‌ ಶಾಲೆ, ಜಯನಗರ: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 164 (ಪ್ರತ್ಯುಜ್‌ 76; ಪವನ್‌ 20ಕ್ಕೆ2, ಮರಿಲಿಂಗಾ 32ಕ್ಕೆ2). ಸರ್ಕಾರಿ ಪ್ರೌಢಶಾಲೆ, ಟಿ.ದಾಸರಹಳ್ಳಿ: 25 ಓವರ್‌ಗಳಲ್ಲಿ 8 ವಿಕೆಟ್‌ಗೆ 166 (ಯಶವಂತ್‌ 30; ಚೈತನ್ಯ 17ಕ್ಕೆ2, ಪ್ರತ್ಯುಜ್‌ 19ಕ್ಕೆ2). ಫಲಿತಾಂಶ: ಸರ್ಕಾರಿ ಪ್ರೌಢಶಾಲೆಗೆ 2 ವಿಕೆಟ್‌ ಗೆಲುವು.

ಬಿ.ಬಿ.ಯು.ಎಲ್‌. ಜೈನ್‌ ವಿದ್ಯಾಲಯ: 26 ಓವರ್‌ಗಳಲ್ಲಿ 5 ವಿಕೆಟ್‌ಗೆ 237 (ಇಂದರ್‌ 111, ಎಂ.ವಿನಯ್‌ ಔಟಾಗದೆ 53; ಎನ್‌.ಆರ್‌.ಉದಿತ್‌ 33ಕ್ಕೆ2). ಸೇಂಟ್‌ ಫ್ರಾನ್ಸಿಸ್‌ ಪ್ರೌಢಶಾಲೆ: 19.3 ಓವರ್‌ಗಳಲ್ಲಿ 114 (ಮಯೂರ್‌ 33ಕ್ಕೆ3, ವಿನಯ್‌ 31ಕ್ಕೆ5). ಫಲಿತಾಂಶ: ಜೈನ್‌ ವಿದ್ಯಾಲಯಕ್ಕೆ 123ರನ್‌ ಗೆಲುವು.

ವಿದ್ಯಾನಿಕೇತನ ಶಾಲೆ, ಬಿ–24: 30 ಓವರ್‌ಗಳಲ್ಲಿ 3 ವಿಕೆಟ್‌ಗೆ 305 (ಆರಿಲ್‌ 116, ಶಿವ ಪ್ರತಾಪ್‌ 71, ಹರಿಣ್‌ 61). ವಿದ್ಯಾ ವಾಹಿನಿ ಶಾಲೆ: 25.1 ಓವರ್‌ಗಳಲ್ಲಿ 79 (ಶಿವ ಪ್ರತಾಪ್‌ 15ಕ್ಕೆ3, ಚಿರಂತ್‌ 8ಕ್ಕೆ2) ಫಲಿತಾಂಶ: ವಿದ್ಯಾನಿಕೇತನ ಶಾಲೆಗೆ 226ರನ್‌ ಗೆಲುವು.

ಸಿ.ಎಂ.ಆರ್‌.ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌: 29 ಓವರ್‌ಗಳಲ್ಲಿ 3 ವಿಕೆಟ್‌ಗೆ 188 (ಓಂಕಾರ್‌ ಔಟಾಗದೆ 50, ಮೋಹಿತ್‌ ಔಟಾಗದೆ 56). ಲೌರಿ ಮೆಮೋರಿಯಲ್‌ ಪ್ರೌಢಶಾಲೆ: 22.2 ಓವರ್‌ಗಳಲ್ಲಿ 72 (ಮಥಾಯನ್‌ 13ಕ್ಕೆ2, ಓಂಕಾರ್‌ 16ಕ್ಕೆ5). ಫಲಿತಾಂಶ: ಸಿಎಂಆರ್‌ ಶಾಲೆಗೆ 116ರನ್‌ ಗೆಲುವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು