ನವಿ ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾರತದ ಸಾಂದರ್ಭಿಕ ಬೌಲರ್ ಶಫಾಲಿ ವರ್ಮಾ ಅವರಿಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿದ್ದು ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್ ಅವರಿಗೆ ಹತಾಶೆ ಮೂಡಿಸಿದೆ.

ಆದರೆ ಸತತ ಮೂರು ಐಸಿಸಿ ಟೂರ್ನಿಗಳಲ್ಲಿ ಫೈನಲ್ ತಲುಪಿದ್ದು ದೇಶದಲ್ಲಿ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಭಾನುವಾರದ ಅಂತಿಮ ಪಂದ್ಯದಲ್ಲಿ ಶತಕ ಬಾರಿಸಿದ ವೋಲ್ವಾರ್ಟ್ ಹೇಳಿದ್ದಾರೆ. ಹರಿಣಗಳ ಪಡೆ 2023ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿತ್ತು. 2024ರ ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ಗೆ ಮಣಿದಿತ್ತು. ಈಗ ಏಕದಿನ ವಿಶ್ವಕಪ್ನಲ್ಲಿ ಭಾರತ ಎದುರು ಸೋಲನುಭವಿಸಿದೆ.

299 ರನ್ಗಳ ಮೊತ್ತ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದಿತ್ತು. ಆದರೆ ಶಫಾಲಿ ಅವರು ಸುನೆ ಲಸ್ (25) ಮತ್ತು ಮರೈಝನ್ ಕಾಪ್ (4) ಅವರ ವಿಕೆಟ್ಗಳನ್ನು ಪಡೆದು ಎದುರಾಳಿಗಳನ್ನು ಒತ್ತಡಕ್ಕೆ ತಳ್ಳಿದ್ದರು.

‘ವಿಶ್ವಕಪ್ ಫೈನಲ್ನಲ್ಲಿ ಪಾರ್ಟ್ಟೈಮ್ ಬೌಲರ್ಗೆ ವಿಕೆಟ್ ಕಳೆದುಕೊಳ್ಳುವುದನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಅವರು ಎರಡು ವಿಕೆಟ್ ಪಡೆದಿದ್ದು ಹತಾಶಗೊಳಿಸಿತು. ಎರಡೂ ಮಹತ್ವದ ವಿಕೆಟ್ಗಳು. ನಂತರ ಅವರಿಗೆ ಮತ್ತಷ್ಟು ವಿಕೆಟ್ ಸಿಗದಂತೆ ಎಚ್ಚರಿಕೆ ವಹಿಸಬೇಕಾಯಿತು’ ಎಂದು ವೋಲ್ವಾರ್ಟ್ ತಿಳಿಸಿದರು.

ಲಾರಾ ವೋಲ್ವಾರ್ಟ್ ಈ ಟೂರ್ನಿಯ 9 ಇನಿಂಗ್ಸ್ಗಳಲ್ಲಿ 761.37 ಸರಾಸರಿಯಲ್ಲಿ 571 ರನ್ ಕಲೆಹಾಕಿದ್ದು, ಒಂದೇ ವಿಶ್ವಕಪ್ನಲ್ಲಿ ದಾಖಲೆಯಾಗಿದೆ. ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ ಶತಕ, ಮೂರು ಪಂದ್ಯಗಳಲ್ಲಿ ಅರ್ಧ ಶತಕ ಅವರ ಹೆಗ್ಗಳಿಕೆ.

‘ನಮ್ಮ ಚೇಸ್ ಉತ್ತಮವಾಗಿದ್ದು, ಬಹುತೇಕ ಅವಧಿಯಲ್ಲಿ ಪೈಪೋಟಿಯಿಂದ ಕೂಡಿತ್ತು. ನನ್ನ ಮತ್ತ ಅನೇರಿ ಡರ್ಕ್ಸೆನ್ ನಡುವಣ ಆರನೇ ವಿಕೆಟ್ ಜೊತೆಯಾಟ ಜೊತೆಯಾಟ (61 ರನ್) ಕೊನೆಯವರೆಗೂ ಬೆಳೆಯಬಹುದೆಂಬ ಯೋಚಿಸಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.