ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ: ಲಖನೌ ಪಿಚ್‌ ಕ್ಯುರೇಟರ್ ವಜಾ

Last Updated 31 ಜನವರಿ 2023, 16:00 IST
ಅಕ್ಷರ ಗಾತ್ರ

ನವದೆಹಲಿ: ಭಾರತ– ನ್ಯೂಜಿಲೆಂಡ್ ನಡುವಣ ಎರಡನೇ ಟಿ20 ಕ್ರಿಕೆಟ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಇಲ್ಲಿನ ಏಕನಾ ಕ್ರೀಡಾಂಗಣದ ಪಿಚ್‌ ಕ್ಯುರೇಟರ್‌ ಅನ್ನು ವಜಾಗೊಳಿಸಲಾಗಿದೆ.

ಪಂದ್ಯಕ್ಕೆ ಸಿದ್ಧಪಡಿಸಿದ್ದ ಪಿಚ್‌ ಬಗ್ಗೆ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿ20 ಪಂದ್ಯಕ್ಕೆ ಯೋಗ್ಯವಾದ ಪಿಚ್‌ ಇದಲ್ಲ ಎಂದಿದ್ದರು.

‘ಪಿಚ್‌ ಸಿದ್ಧಪಡಿಸಿದ್ದ ಕ್ಯುರೇಟರ್‌ ಅನ್ನು ವಜಾಗೊಳಿಸಲಾಗಿದ್ದು, ಅವರ ಜಾಗದಲ್ಲಿ ಸಂಜೀವ್‌ ಕುಮಾರ್‌ ಅಗರವಾಲ್‌ ಅವರನ್ನು ನೇಮಿಸಲಾಗಿದೆ’ ಎಂದು ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ಮೂಲಗಳು ಹೇಳಿವೆ.

‘ದೇಸಿ ಕ್ರಿಕೆಟ್‌ ಪಂದ್ಯಗಳಿಗೆ ಇಲ್ಲಿನ ಎಲ್ಲ ಪಿಚ್‌ಗಳನ್ನು ಬಳಸಲಾಗಿತ್ತು. ಅಂತರರಾಷ್ಟ್ರೀಯ ಪಂದ್ಯಕ್ಕಾಗಿ ಒಂದು ಅಥವಾ ಎರಡು ಪಿಚ್‌ಗಳನ್ನು ಮೀಸಲಿಡಬೇಕಿತ್ತು. ಅತಿಯಾಗಿ ಪಂದ್ಯಗಳನ್ನು ಆಡಿಸಿದ್ದರಿಂದ ಪಿಚ್‌ ತನ್ನ ಸ್ವರೂಪ ಕಳೆದುಕೊಂಡಿತ್ತು. ಅದನ್ನು ಸರಿಪಡಿಸಲು ಸಾಕಷ್ಟು ಕಾಲಾವಕಾಶ ಲಭಿಸಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT