ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಆಡದ ಪಂದ್ಯಕ್ಕೆ ಪ್ರೇಕ್ಷಕರ ನಿರಾಸಕ್ತಿ ಗ್ಯಾಲರಿ ಅರ್ಧಕ್ಕರ್ಧ ಖಾಲಿ

ಬೃಹತ್‌ ಕ್ರೀಡಾಂಗಣ: ಭಾರತ ಆಡದ ಪಂದ್ಯಕ್ಕೆ ಪ್ರೇಕ್ಷಕರ ನಿರಾಸಕ್ತಿ
Published 5 ಅಕ್ಟೋಬರ್ 2023, 18:13 IST
Last Updated 5 ಅಕ್ಟೋಬರ್ 2023, 18:13 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಭಾರತದಲ್ಲಿ ಈಗ ಏಕಕಾಲದಲ್ಲಿ ಎರಡು ವಿಶ್ವಕಪ್‌ಗಳು ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಒಂದು ಭಾರತ ಆಡುವ ಪಂದ್ಯಗಳು. ಈ ಪಂದ್ಯಗಳಿಗೆ ಟಿಕೆಟ್‌ ಸಿಗುವುದು ದೂರದ ಮಾತು. ಟಿಕೆಟ್‌ಗಳಿಗೆ ತಮ್ಮನ್ನು ಯಾರೂ ಕೇಳಬಾರದು ಎಂದು ಸ್ವತಃ ವಿರಾಟ್‌ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಪಷ್ಟವಾಗಿಯೇ ಹೇಳಿದ್ದಾರೆ. ಕಿಕ್ಕಿರಿದ ಗ್ಯಾಲರಿಗಳನ್ನು ಕಂಡರೆ ಏಕದಿನ ಕ್ರಿಕೆಟ್‌ ಪಂದ್ಯದ ಜೀವಂತಿಕೆ ಎದ್ದುಕಾಣುತ್ತದೆ.

ಇನ್ನೊಂದು ದೃಶ್ಯ ಇದಕ್ಕೆ ಭಿನ್ನವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ನಡುವಣ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಹತ್ತು ಸಾವಿರ ಪ‍್ರೇಕ್ಷಕರೂ ಇರಲಿಲ್ಲ. ಸೂರ್ಯನ ತಾಪ ಇಳಿಯುತ್ತಿದ್ದಂತೆ ಈ ಸಂಖ್ಯೆ 15 ಸಾವಿರ ಆಸುಪಾಸು ಇತ್ತು. ಅಂತಿಮವಾಗಿ, ಕತ್ತಲು ಆವರಿಸಿದಾಗ, 1.32 ಲಕ್ಷ ಆಸನ ಸಾಮರ್ಥ್ಯದ ಈ ಕ್ರೀಡಾಂಗಣದಲ್ಲಿ ಸೇರಿದ ಪ್ರೇಕ್ಷಕರ ಸಂಖ್ಯೆ 47,000 ಕೂಡ ಆಗಲಿಲ್ಲ.

2019ರ ವಿಶ್ವಕಪ್‌ನಲ್ಲಿ ಮುಖಾಮುಖಿ ಆದ ಈ ಎರಡು ತಂಡಗಳಿಗೆ ಕ್ರೀಡಾಂಗಣ ಅರ್ಧದಷ್ಟು ಖಾಲಿಯಾಗಿರುವುದು ಊಹಿಸಲೂ ಕಷ್ಟವಾಗಿರಬಹುದು.

ಐಸಿಸಿಯ ಜಾಗತಿಕ ರಾಯಬಾರಿ ಸಚಿನ್ ತೆಂಡೂಲ್ಕರ್ ಅವರು ಆಕರ್ಷಕ ಟ್ರೋಫಿಯೊಂದಿಗೆ ಬಂದಾಗ, ಪಂದ್ಯಕ್ಕೆ ಈ ರೀತಿಯ ಸಪ್ಪೆ ಪ್ರತಿಕ್ರಿಯೆ ನಿರೀಕ್ಷಿಸಿರಲಿಕ್ಕಿಲ್ಲ.

ಏಕದಿನ ಕ್ರಿಕೆಟ್‌ ಆಕರ್ಷಣೆ ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ.ಭಾರತದ ಕ್ರಿಕೆಟ್‌ ಅಭಿಮಾನಿಗಳು ತಮ್ಮ ಆಟಗಾರರನ್ನು ಆರಾಧಿಸುವ ರೀತಿಯೇ ಬೇರೆ. ಆದರೆ ಬೇರೆ ತಂಡಗಳು ಆಡುವಾಗ ಅವರು ಆಟದ ಮೇಲೆ ಇದೇ ರೀತಿಯ ಪ್ರೀತಿ ತೋರಿಸುವುದಿಲ್ಲ.

ಡ್ರೋನ್ ಕ್ಯಾಮೆರಾ ಒಂದು ಕೋನದಲ್ಲಿ ಕ್ರೀಡಾಂಗಣದ ಚಿತ್ರೀಕರಣ ಮಾಡಿದಾಗ ಬಹುತೇಕ ಖಾಲಿ ಗ್ಯಾಲರಿಗಳು ಎದ್ದುಕಂಡವು.

ಪಂದ್ಯಕ್ಕೆ ಮೊದಲು ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಅಧಿಕಾರಿಯೊಬ್ಬರು 50 ಸಾವಿರದಿಂದ 60 ಸಾವಿರ ಪ್ರೇಕ್ಷಕರು ಸೇರಬಹುದೆಂದು ಸುದ್ದಿಸಂಸ್ಥೆ ಮುಂದೆ ನಿರೀಕ್ಷೆ ವ್ಯಕ್ತಪಡಿಸಿದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT