ಢಾಕಾ: ಬಾಂಗ್ಲಾದೇಶ ಟ್ವೆಂಟಿ–20 ಕ್ರಿಕೆಟ್ ತಂಡದ ನಾಯಕ ಮೆಹಮುದುಲ್ಲಾ ರಿಯಾದ್ ಅವರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಅವರು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪ್ಲೇ ಆಫ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಢಾಕಾದ ಸ್ಥಳೀಯ ಮಾಧ್ಯಮಗಳು ಈ ವಿಷಯ ವರದಿ ಮಾಡಿವೆ.

34 ವರ್ಷದ ಅನುಭವಿ ಆಲ್‌ರೌಂಡರ್‌ಮೆಹಮುದುಲ್ಲಾ ಭಾನುವಾರ ರಾತ್ರಿ ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಬೇಕಿತ್ತು. ಆದರೆ ಕೊರೊನಾ ಸೋಂಕು ಇರುವುದು ತಿಳಿದುಬಂದ ಬಳಿಕ ಪ್ರತ್ಯೇಕವಾಸದ ಮೊರೆ ಹೋಗಿದ್ದಾರೆ.

ನವೆಂಬರ್ 21 ಅಥವಾ 22ರಂದು ಆರಂಭವಾಗಲಿರುವ ಬಂಗಬಂಧು ಟ್ವೆಂಟಿ–20 ಕಪ್ ಟೂರ್ನಿಯಲ್ಲೂ ಅವರು ಕಣಕ್ಕಿಳಿಯುವುದು ಅನುಮಾನವಾಗಿದೆ. ಮೆಹಮುದುಲ್ಲಾ ಅವರು ಸದ್ಯದಲ್ಲೇ ಎರಡನೇ ಸುತ್ತಿನ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.

ಪಿಎಸ್‌ಎಲ್ ಟೂರ್ನಿಯಲ್ಲಿ ಮುಹಮುದುಲ್ಲಾ ಅವರು ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಈಗ ಅವರ ಸ್ಥಾನಕ್ಕೆ ಇಂಗ್ಲೆಂಡ್‌ನ ಮೊಯಿನ್ ಅಲಿ ಆಡಲಿದ್ದಾರೆ.

ಬಾಂಗ್ಲಾದೇಶದ ಕೋವಿಡ್ ತಡೆ ನಿಯಮಗಳ ಪ್ರಕಾರ, ದೇಶದಿಂದ ತೆರಳುವ ವ್ಯಕ್ತಿ ಕಡ್ಡಾಯವಾಗಿ ಕೋವಿಡ್ ‘ನೆಗೆಟಿವ್‘ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.