ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ–20 ವಿಶ್ವಕಪ್ ಜಯದ ಸಂಭ್ರಮಾಚರಣೆಗೆ ಭಾರತ ತಂಡವನ್ನು ಆಹ್ವಾನಿಸಿದ ಮಾಲ್ದೀವ್ಸ್

Published 8 ಜುಲೈ 2024, 12:19 IST
Last Updated 8 ಜುಲೈ 2024, 12:19 IST
ಅಕ್ಷರ ಗಾತ್ರ

ಮಾಲೆ: ಟಿ–20 ವಿಶ್ವಕಪ್ ಜಯದ ಸಂಭ್ರಮಾಚರಣೆಯನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸುವಂತೆ ಅಲ್ಲಿನ ಪ್ರವಾಸೋದ್ಯಮ ಸಂಘ ಮತ್ತು ಮಾರ್ಕೆಟಿಂಗ್ ಹಾಗೂ ಸಾರ್ವಜನಿಕ ಸಂಪರ್ಕ ನಿಗಮ ಆಹ್ವಾನಿಸಿದೆ.

ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದ ಟಿ–ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಟ್ರೋಫಿ ಎತ್ತಿಹಿಡಿದಿತ್ತು.

‘ಮಾಲ್ದೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಶನ್(ಎಂಎಂಪಿಆರ್‌ಸಿ), ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟೂರಿಸಂ ಇಂಡಸ್ಟ್ರೀ(ಎಂಎಟಿಐ) ಜಂಟಿಯಾಗಿ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಮುಕ್ತ ಆಹ್ವಾನವನ್ನು ನೀಡುತ್ತಿದ್ದೇವೆ’ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

'ನಿಮಗೆ ಆತಿಥ್ಯ ನೀಡಲು ಮತ್ತು ನಿಮ್ಮ ವಾಸ್ತವ್ಯವು ಸ್ಮರಣೀಯ ಕ್ಷಣಗಳು, ವಿಶ್ರಾಂತಿಯ ಅನುಭವಗಳಿಂದ ತುಂಬಿರುವುದನ್ನು ಖಚಿತಪಡಿಸಲು ನಾವು ಇಚ್ಛಿಸುತ್ತೇವೆ’ಎಂದು ಎಂಎಂ‍ಪಿಆರ್‌ಸಿ ಸಿಇಒ ಇಬ್ರಾಹಿಂ ಶಿಯುರಿ ಮತ್ತು ಎಂಎಟಿಐ ಕಾರ್ಯದರ್ಶಿ ಅಹ್ಮದ್ ನಜೀರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಹ್ವಾನದಲ್ಲಿ ಭಾರತ ಮತ್ತು ಮಾಲ್ದೀವ್ಸ್ ನಡುವಿನ ಬಲಿಷಗಠ ಮತ್ತು ದೀರ್ಘಾವಧಿಯ ಸಾಂಸ್ಕೃತಿಕ ಮತ್ತು ಕ್ರೀಡಾ ಒಡಂಬಡಿಕೆಯನ್ನು ಒತ್ತಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT