ಮಂಗಳವಾರ, ಸೆಪ್ಟೆಂಬರ್ 17, 2019
27 °C

ಟೆಸ್ಟ್‌ ಕ್ರಿಕೆಟ್‌ಗೆ ನಬಿ ವಿದಾಯ

Published:
Updated:
Prajavani

ಚಿತ್ತಗಾಂಗ್‌: ಅಫ್ಗಾನಿಸ್ತಾನದ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಶನಿವಾರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅವರು ಈ ಹಿಂದೆ ತಂಡದ ನಾಯಕರಾಗಿದ್ದರು. ಸದ್ಯ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಟೆಸ್ಟ್‌ ಪಂದ್ಯದ ನಂತರ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿ ನಬಿ ಹೇಳಿಕೆಯ ವಿಡಿಯೊ ಬಿಡುಗಡೆ ಮಾಡಿದೆ. ‘ ಅಫ್ಗಾನಿಸ್ತಾನ ತಂಡಕ್ಕೆ 18 ವರ್ಷಗಳ ಸೇವೆ ಸಲ್ಲಿಸಿದ್ದೇನೆ. ತಂಡಕ್ಕೆ ಟೆಸ್ಟ್‌ ಮಾನ್ಯತೆ ದೊರಕಿಸಿಕೊಡುವುದು ನನ್ನ ಕನಸಾಗಿತ್ತು. ಅದು ಈಗ ಈಡೇರಿದೆ’ ಎಂದು ನಬಿ ಹೇಳಿದ್ದಾರೆ.

ತನ್ನ ಸ್ಥಾನದಲ್ಲಿ ಉದಯೋನ್ಮುಖ ಯುವ ಆಟಗಾರರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದನ್ನು ನೋಡಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. 34 ವರ್ಷದ ನಬಿ 121 ಅಂತರರಾಷ್ಟ್ರೀಯ ಏಕದಿನ ಹಾಗೂ 68 ಟ್ವೆಂಟಿ–20 ಪಂದ್ಯಗಳಲ್ಲಿ ಅಫ್ಗಾನಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. 

Post Comments (+)