ಲೀಡ್ಸ್: ಶುಕ್ರವಾರ ಶ್ರೀಲಂಕಾ ತಂಡವು ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟುವಲ್ಲಿ ಇಂಗ್ಲೆಂಡ್ ವಿಫಲವಾಗಿತ್ತು. ಅದರಿಂದಾಗಿ ಸೋಲನುಭವಿಸಿತ್ತು.

ಸ್ಫೋಟಕ ಬ್ಯಾಟ್ಸ್‌ಮನ್‌ಗಳು ದಂಡು ಇರುವ ಇಂಗ್ಲೆಂಡ್ ತಂಡವು ಈ ರೀತಿ ಎಡವಿದ್ದು ನಾಯಕ ಇಯಾನ್ ಮಾರ್ಗನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

‘ಯಾವುದೇ ಮೊತ್ತವನ್ನು ಬೆನ್ನಟ್ಟುವಾಗ ಒಂದು ಉತ್ತಮ ಪಾಲುದಾರಿಕೆ ಆಟ ಮುಖ್ಯವಾಗುತ್ತದೆ. ಅಂತಹ ಒಂದು ಜೊತೆಯಾಟವಾಡುವಲ್ಲಿ ನಾವು ಬಹಳಷ್ಟು ಹಂತಗಳಲ್ಲಿ ಸಫಲರಾಗಲಿಲ್ಲ. ಅದು ಸೋಲಿಗೆ ಕಾರಣವಾಯಿತು. ನಮ್ಮಲ್ಲಿರುವ ಬ್ಯಾಟ್ಸ್ ಮನ್‌ಗಳು ಹೊಂದಾಣಿಕೆಯ ಆಟವಾಡ ಬೇಕಿತ್ತು’ ಎಂದು ಪಂದ್ಯದ ನಂತರ ಐಸಿಸಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನ ದಲ್ಲಿ ಮಾರ್ಗನ್ ಹೇಳಿದರು.

ಶ್ರೀಲಂಕಾ ತಂಡವು 232 ರನ್‌ಗಳ ಗುರಿ ನೀಡಿತ್ತು. ಆದರೆ ಇಂಗ್ಲೆಂಡ್ ತಂಡವು ಜೋ ರೂಟ್ (52 ರನ್) ಮತ್ತು ಬೆನ್ ಸ್ಟೋಕ್ಸ್ (ಔಟಾಗದೆ 82) ಅವರ ಅರ್ಧಶತಕಗಳ ಹೊರತಾಗಿಯೂ20 ರನ್‌ಗಳಿಂದ ಸೋತಿತು. ನಾಲ್ಕು ವಿಕೆಟ್‌ಗಳನ್ನು ಗಳಿಸಿದ ಲಸಿತ್ ಮಾಲಿಂಗ್ ಲಂಕಾ ತಂಡದ ಗೆಲುವಿನ ರೂವಾರಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.