ಅಭಿಮಾನಿ ಪಾದಕ್ಕೆರಗಿದಾಗ ರಾಷ್ಟ್ರಧ್ವಜ ನೆಲ ಸ್ಪರ್ಶಿಸದಂತೆ ತಡೆದ ದೋನಿ

7

ಅಭಿಮಾನಿ ಪಾದಕ್ಕೆರಗಿದಾಗ ರಾಷ್ಟ್ರಧ್ವಜ ನೆಲ ಸ್ಪರ್ಶಿಸದಂತೆ ತಡೆದ ದೋನಿ

Published:
Updated:

ಹ್ಯಾಮಿಲ್ಟನ್: ಸೆಡನ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಭಾರತ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗು ಅಂತಿಮ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದ ವೇಳೆ ಭದ್ರತೆಯನ್ನು ಭೇದಿಸಿ ದೋನಿ ಅಭಿಮಾನಿಯೊಬ್ಬರು ಕ್ರಿಕೆಟ್ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.

ಕೈಯಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ಮೈದಾನದೊಳಗೆ ಓಡುತ್ತಾ ಬಂದ ಅಭಿಮಾನಿ ಕ್ರೀಸ್‍ನಲ್ಲಿದ್ದ ಮಹೇಂದ್ರ ಸಿಂಗ್ ದೋನಿ ಪಾದಕ್ಕೆ ನಮಸ್ಕರಿಸಿದ್ದಾರೆ. ಆತ ಪಾದಕ್ಕೆ ನಮಸ್ಕರಿಸುವ ಹೊತ್ತಲ್ಲಿ ರಾಷ್ಟ್ರಧ್ವಜ ನೆಲ ಸ್ಪರ್ಶಿಸದಂತೆ ದೋನಿ ಆ ಧ್ವಜವನ್ನು ತಮ್ಮ ಕೈಗೆತ್ತಿಕೊಂಡಿದ್ದಾರೆ.

ಅಭಿಮಾನಿಯೊಂದಿಗೆ ದೋನಿಯ ಸಂಯಮದ ವರ್ತನೆಯ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೋನಿಯ ಸಮಯಪ್ರಜ್ಞೆ ಹಾಗೂ ದೊಡ್ಡ ಗುಣದ ಬಗ್ಗೆ ಜನರು ಶ್ಲಾಘಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 58

  Happy
 • 4

  Amused
 • 2

  Sad
 • 7

  Frustrated
 • 10

  Angry

Comments:

0 comments

Write the first review for this !