ಶನಿವಾರ, ಡಿಸೆಂಬರ್ 4, 2021
26 °C

ಧೋನಿ ಕಟ್ಟಾ ಅಭಿಮಾನಿ ಪಾಕಿಸ್ತಾನದ ಚಾಚಾ ಶಿಕಾಗೋ ಬೆಂಬಲ ಯಾರಿಗೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಮಹೇಂದ್ರ ಸಿಂಗ್ ಧೋನಿ ಅವರ ಕಟ್ಟಾ ಅಭಿಮಾನಿಯಾಗಿರುವ ಚಾಚಾ ಶಿಕಾಗೋ ಖ್ಯಾತಿಯ ಬಶೀರ್, ಈಗ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ವೀಕ್ಷಿಸಲು ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ ಎಂದು ಕೇಳಿದಾಗ 'ಪಾಕಿಸ್ತಾನ ಗೆಲ್ಲಲಿದೆ. ಆದರೆ ಐ ಲಯ್ ಯೂ ಧೋನಿ' ಎಂದು ನೇರ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: 

ಪಾಕಿಸ್ತಾನದ ಅಭಿಮಾನಿ ಆದರೂ ಧೋನಿ ಅವರನ್ನು ಅತೀವವಾಗಿ ಇಷ್ಟಪಡುತ್ತಾರೆ. ಈ ಬಾರಿಯೂ ಪಂದ್ಯ ವೀಕ್ಷಿಸಲು ಧೋನಿ ಟಿಕೆಟ್ ಒದಗಿಸಲಿದ್ದಾರೆ ಎಂದು ಹೇಳುತ್ತಾರೆ.

 

 

 

ಧೋನಿ ಟೀಮ್ ಇಂಡಿಯಾ ಮಾರ್ಗದರ್ಶಕರಾಗಿ ಮತ್ತೆ ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವುದು ಚಾಚಾ ಶಿಕಾಗೋ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಕೋವಿಡ್ ನಿಯಮಗಳು ಜಾರಿಯಲ್ಲಿರುವುದರಿಂದ ಧೋನಿ ಭೇಟಿ ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ಟಿಕೆಟ್ ಒದಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ವೀಕ್ಷಣೆಗಾಗಿ ಜೆರ್ಸಿಯನ್ನು ವಿಶಿಷ್ಟ ರೂಪದಲ್ಲಿ ವಿನ್ಯಾಸಗೊಳಿಸಿದ್ದಾರೆ. ದೇಹದ ಬಲಭಾಗದಲ್ಲಿ ಭಾರತ ಹಾಗೂ ಎಡಭಾಗದಲ್ಲಿ ಪಾಕಿಸ್ತಾನ ಜೆರ್ಸಿಯನ್ನು ವಿನ್ಯಾಸಗೊಳಿಸಿದ್ದಾರೆ. ಅಲ್ಲದೆ 'ವೆಲ್‌ಕಮ್ ಬ್ಯಾಕ್ ಧೋನಿ' ಎಂದು ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು