ಮುಂಬೈ: ಮುಂಬೈ ರಣಜಿ ಆಟಗಾರರಾದ ವಿನಾಯಕ್ ಭೊಯಿರ್, ರಾಯ್‌ಸ್ಟನ್ ಡಯಾಸ್ ಸೇರಿದಂತೆ 90ಕ್ಕೂ ಹೆಚ್ಚು ಕ್ರಿಕೆಟಿಗರು ಸೋಮವಾರ ರಕ್ತದಾನ ಮಾಡಿದರು. ಜೆ.ಜೆ.ಆಸ್ಪತ್ರೆ ಹಮ್ಮಿಕೊಂಡಿದ್ದ ಈ ಅಭಿಯಾನಕ್ಕೆ ಆಟಗಾರರು ಓಗೊಟ್ಟರು.

ವಿರಾರ್‌ನಲ್ಲಿ ವಿಷ್ಣು ವಾಮನ್ ಥಾಕೂರ್ ಚಾರಿಟೆಬಲ್ ಟ್ರಸ್ಟ್, ವಿವಾ ಕಾಲೇಜು ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆಯ ಅಧೀನದಲ್ಲಿರುವ ಶ್ರೀನಾಥ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಆಸ್ಪತ್ರೆ ಈ ಅಭಿಯಾನ ಹಮ್ಮಿಕೊಂಡಿತ್ತು.

90ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅಜಿಂಕ್ಯ ನಾಯಕ್ ತಿಳಿಸಿದ್ದಾರೆ. ಸ್ವತಃ ಅಜಿಂಕ್ಯ ಅಲ್ಲದೇ, ಶಾಸಕ ಕ್ಷಿತಿಜ್ ಠಾಕೂರ್ ಅವರೂ ರಕ್ತದಾನದಲ್ಲಿ ಭಾಗಿಯಾದರು.

‘ಈ ಆಟಗಾರರು ರಾಜ್ಯ ಹಾಗೂ ರಾಷ್ಟ್ರಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.