ಢಾಕಾ: ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್ ಅವರ ಸೊಗಸಾದ ಆಟದ ನೆರವಿನಿಂದ ಬಾಂಗ್ಲಾದೇಶ ತಂಡ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತು.
ಶಕೀಬ್ ಅಲ್ ಹಸನ್ ಬಳಗ ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2–0 ರಲ್ಲಿ ತನ್ನದಾಗಿಸಿಕೊಂಡಿತು. ಮೊದಲ ಪಂದ್ಯವನ್ನು ಬಾಂಗ್ಲಾ 6 ವಿಕೆಟ್‌ಗಳಿಂದ ಜಯಿಸಿತ್ತು.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟಾಯಿತು. 14 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದ ಮಿರಾಜ್, ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಬೆನ್ ಡಕೆಟ್ (28 ರನ್) ಮತ್ತು ಫಿಲ್ ಸಾಲ್ಟ್ (25) ಮಾತ್ರ ಅಲ್ಪ ಹೋರಾಟ ನಡೆಸಿದರು.
ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾ ಪರ ನಜ್ಮುಲ್ ಹೊಸೇನ್ ಶಾಂತೊ (ಔಟಾಗದೆ 46,47 ಎ.) ಮತ್ತು ಮಿರಾಜ್ (20 ರನ್, 16 ಎ.) ಅವರು 4ನೇ ವಿಕೆಟ್‌ಗೆ 41 ರನ್ ಸೇರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಇಂಗ್ಲೆಂಡ್ ತಂಡ ಬಾಂಗ್ಲಾ ನೆಲದಲ್ಲಿ ಟಿ20 ಸರಣಿಯಲ್ಲಿ ಸೋತದ್ದು ಇದೇ ಮೊದಲು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 20 ಓವರ್‌ಗಳಲ್ಲಿ 117 (ಫಿಲ್ ಸಾಲ್ಟ್ 25, ಮೊಯೀನ್ ಅಲಿ 15, ಬೆನ್ ಡಕೆಟ್ 28, ಮೆಹದಿ ಹಸನ್ ಮಿರಾಜ್ 12ಕ್ಕೆ 4, ಶಕೀಬ್ ಅಲ್ ಹಸನ್ 13ಕ್ಕೆ 1, ಮುಸ್ತಫಿಜುರ್ ರೆಹಮಾನ್ 19ಕ್ಕೆ 1, ಹಸನ್ ಮಹಮೂದ್ 10ಕ್ಕೆ 1)
ಬಾಂಗ್ಲಾದೇಶ 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 120 (ನಜ್ಮುಲ್ ಹೊಸೇನ್ ಶಾಂತೊ ಔಟಾಗದೆ 46, ಮೆಹದಿ ಹಸನ್ ಮಿರಾಜ್ 20, ಜೋಫ್ರಾ ಆರ್ಚರ್ 13ಕ್ಕೆ 3)
ಫಲಿತಾಂಶ: ಬಾಂಗ್ಲಾದೇಶಕ್ಕೆ 4 ವಿಕೆಟ್ ಗೆಲುವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.