ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ತಂಡದಲ್ಲಿ ಹಿಂದೂ ಆಟಗಾರನನ್ನು ಕಡೆಗಣಿಸಿದ್ಯಾರು? ಅಖ್ತರ್‌ಗೆ ಅಲಿ ಪ್ರಶ್ನೆ

ದನೀಶ್ ಕನೇರಿಯಾ ಅವರನ್ನು ಕಡೆಗಣಿಸಲಾಗಿತ್ತು ಎಂದಿದ್ದ ಅಖ್ತರ್
Last Updated 7 ಜನವರಿ 2020, 13:19 IST
ಅಕ್ಷರ ಗಾತ್ರ

ಕರಾಚಿ:ಹಿಂದೂ ಧರ್ಮದವರಾಗಿದ್ದ ದನೀಶ್ ಕನೇರಿಯಾ ಅವರನ್ನುಪಾಕಿಸ್ತಾನ ತಂಡದಲ್ಲಿ ಕಡೆಗಣಿಸಿದ್ದು ಯಾರು? ಅವರ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಮಾಜಿ ಕ್ರಿಕೆಟಿಗಬಾಸಿತ್‌ ಅಲಿ ಅವರು ಶೋಯಬ್ ಅಖ್ತರ್ ಅವರನ್ನು ಪ್ರಶ್ನಿಸಿದ್ದಾರೆ.

ಪಿ ಟಿವಿ ವಾಹಿನಿಯ ‘ಗೇಮ್ ಆನ್‌ ಹೈ’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶೋಯಬ್,ದನೀಶ್ ಕನೇರಿಯಾ ಅವರು ಹಿಂದೂ ಧರ್ಮದವರಾಗಿದ್ದರಿಂದ ಪಾಕಿಸ್ತಾನ ತಂಡದಲ್ಲಿ ಅವಗಣನೆಗೆ ಒಳಗಾಗಿದ್ದರು ಎಂದು ಹೇಳಿದ್ದರು.

ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಬಾಸಿತ್ ಅಲಿ, ‘ಸಮಯ ಬಂದಾಗ ಕಡೆಗಣಿಸಿದವರ ಹೆಸರುಗಳನ್ನು ಹೇಳುತ್ತೇನೆ ಎಂದುದನೀಶ್ ಹೇಳಿರುವುದು ನನ್ನನ್ನು ಅಚ್ಚರಿಗೊಳಿಸಿತು. ಶೋಯಬ್‌ಗೆ ಯಾವುದೇ ಪ್ರಚಾರ ಬೇಕಿಲ್ಲ. ಅವರು ಈಗಾಗಲೇ ಸಾಕಷ್ಟು ಅಭಿಮಾನಿಗಳ ನೆಚ್ಚಿನ ವ್ಯಕ್ತಿಯಾಗಿದ್ದಾರೆ. ಅವರಿಗೆ ಖ್ಯಾತಿಯ ಅವಶ್ಯಕತೆಯಿಲ್ಲ. ಆದರೆ, ಶೋಯಬ್‌ ಅವರ (ಕಡೆಗಣಿಸಿದವರ) ಹೆಸರುಗಳನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾವು ಆಡುವ ದಿನಗಳಲ್ಲಿ ಆ ರೀತಿಯ ಯಾವುದೇ ತಾರತಮ್ಯವನ್ನು ಕಂಡಿಲ್ಲ ಎಂದಿರುವ ಅಲಿ, ‘ಈ ರೀತಿಯ (ಧರ್ಮಾಧಾರಿತ ತಾರತ್ಮಯ) ಪ್ರಕರಣವು ನಾನು ಆಡುವ ದಿನಗಳಲ್ಲಿ ನಡೆದಿರಲಿಲ್ಲ’ ಎಂದೂ ತಿಳಿಸಿದ್ದಾರೆ.

ಅಖ್ತರ್,‘ನಾನು ಆಡುವ ಸಂದರ್ಭದಲ್ಲಿ ತಂಡದಲ್ಲಿ ಪ್ರಾದೇಶಿಕತೆ ಮತ್ತು ಧರ್ಮದ ಬಗ್ಗೆ ಮಾತನಾಡಿದ ಇಬ್ಬರು, ಮೂವರೊಂದಿಗೆ ಜಗಳ ಮಾಡಿದ್ದೆ. ಕರಾಚಿ, ಪಂಜಾಬ್ ಅಥವಾ ಪೇಶಾವರದಿಂದ ಬಂದವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಹಿಂದೂ ಅಗಿರಲೀ. ಯಾರೇ ಆಗಿರಲಿ ಉತ್ತಮವಾಗಿ ಆಡಿ ತಂಡಕ್ಕೆ ಕಾಣಿಕೆ ನೀಡುವುದು ಮುಖ್ಯ. ಕನೇರಿಯಾ ಉತ್ತಮವಾಗಿ ಆಡುತ್ತಿದ್ದರು’ ಎಂದು ತಿಳಿಸಿದ್ದರು. ‌

‘ಕನೇರಿಯಾ ಅವರೊಂದಿಗೆ ಊಟ ಮಾಡಲು ಮತ್ತು ಆಹಾರ ಹಂಚಿಕೊಳ್ಳಲೂ ಕೂಡ ಹಿಂಜರಿಯುತ್ತಿದ್ದರು. ಈ ಸ್ಥಳದಿಂದ ಅವರೇಕೆ ಆಹಾರ ತೆಗೆದುಕೊಂಡು ಹೋಗುತ್ತಿದ್ದಾರೆಂದು ಉಳಿದವರು ಪ್ರಶ್ನಿಸುತ್ತಿದ್ದರು. ಆದರೆ, ಅದೇ ಕನೇರಿಯಾ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ ಕಾರಣರಾಗಿದ್ದರು. ಇಂಗ್ಲೆಂಡ್‌ನ ಪ್ರಮುಖ ವಿಕೆಟ್‌ಗಳನ್ನು ಕಿತ್ತು ವಿಜೃಂಭಿಸಿದ್ದರು. ಅದರ ಶ್ರೇಯವನ್ನು ಅವರಿಗೆ ನೀಡಲು ಕೂಡ ಕೆಲವರಿಗೆ ಮನಸ್ಸಿರಲಿಲ್ಲ’ ಎಂದು ವಿಷಾದಿಸಿದ್ದರು.

ಲೆಗ್‌ಸ್ಪಿನ್ನರ್ ದನೀಶ್ ಪರಬ್ ಶಂಕರ್ ಕನೇರಿಯಾ, 2009ರಲ್ಲಿ ಡುರಾಮ್‌ನಲ್ಲಿ ನಡೆದಿದ್ದ ಟೂರ್ನಿಯೊಂದರಲ್ಲಿ ಎಸ್ಸೆಕ್ಸ್ ತಂಡದಲ್ಲಿ ಆಡುವಾಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅವರು ಪಾಕ್‌ ಪರ 61 ಟೆಸ್ಟ್‌ ಪಂದ್ಯಗಳಲ್ಲಿಆಡಿ 261 ವಿಕೆಟ್‌ ಕಿತ್ತಿದ್ದರು. 18 ಏಕದಿನ ಪಂದ್ಯಗಳಿಂದ 15 ವಿಕೆಟ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT