ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್: ಲಮಿಚಾನೆಗೆ ವೀಸಾ ನಿರಾಕರಣೆ

Published 30 ಮೇ 2024, 16:32 IST
Last Updated 30 ಮೇ 2024, 16:32 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚಾನೆ ಅವರಿಗೆ ಅಮೆರಿಕ ರಾಯಭಾರ ಕಚೇರಿ ವೀಸಾ ನಿರಾಕರಿಸಿದೆ. ಅವರು ಟಿ20 ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ನೇಪಾಳ ಗುರುವಾರ ಹೇಳಿದೆ.

ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿ ಸಹಭಾಗಿತ್ವದಲ್ಲಿ ಶನಿವಾರದಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ನೇಪಾಳದ ಮೊದಲ ಪಂದ್ಯ ಜೂನ್ 4ರಂದು ಡಲ್ಲಾಸ್‌ನಲ್ಲಿ ನಡೆಯಲಿದೆ.  

ಅತ್ಯಾಚಾರ ಪ್ರಕರಣದಲ್ಲಿ ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಲೆಗ್‌ಸ್ಪಿನ್ನರ್ ಲಾಮಿಚಾನೆ ಅವರನ್ನು ಆಯ್ಕೆ ಮಾಡಲು ನೇಪಾಳ ಬಯಸಿತ್ತು.

‘ಕಳೆದ ವಾರ ಅಮೆರಿಕ ವೀಸಾ ನಿರಾಕರಿಸಿದೆ. ಈ ನಿರ್ಧಾರ ದುರದೃಷ್ಟಕರ’ ಎಂದು ಲಮಿಚಾನೆ ಬೇಸರ ವ್ಯಕ್ತಪಡಿಸಿದ್ದಾರೆ.

ನೇಪಾಳ ಕ್ರಿಕೆಟ್ ಸಂಸ್ಥೆಯ ಕೇಂದ್ರ ಸಮಿತಿ ಸದಸ್ಯ ಚುಂಬಿ ಲಾಮಾ, ಅಮೆರಿಕ ವೀಸಾಕ್ಕಾಗಿ ನಡೆಸಿದ ಪ್ರಯತ್ನವು ವಿಫಲವಾಗಿದೆ ಎಂದು ಹೇಳಿದರು.

23 ವರ್ಷದ ಲಮಿಚಾನೆ ಅವರು ಕೆಲ ವರ್ಷಗಳ ಹಿಂದೆ ನೇಪಾಳ ಕ್ರಿಕೆಟ್‌ಗೆ ಪ್ರಸಿದ್ಧಿ ತಂದುಕೊಟ್ಟಿದ್ದರು. 2022 ರಲ್ಲಿ ಕಠ್ಮಂಡು ಹೋಟೆಲ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದಾಗಿ ಅವರನ್ನು ತಂಡದಲ್ಲಿ ಸೇರಿಸಿರಲಿಲ್ಲ.

ನೇಪಾಳ ತಂಡದಲ್ಲಿ ಯಾವುದೇ ಬದಲಾವಣೆಗೆ ಈಗ ಐಸಿಸಿಯ ಈವೆಂಟ್ ಟೆಕ್ನಿಕಲ್ ಕಮಿಟಿಯ ಅನುಮೋದನೆ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT