ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Cricket World Cup: ಎನ್‌ಸಿಎನಲ್ಲಿ ತರಬೇತಿ ಪಡೆಯಲಿರುವ ನೇಪಾಳ ತಂಡ

Published : 13 ಆಗಸ್ಟ್ 2024, 3:02 IST
Last Updated : 13 ಆಗಸ್ಟ್ 2024, 3:02 IST
ಫಾಲೋ ಮಾಡಿ
Comments

ಕಠ್ಮಂಡು: ಕೆನಡಾದಲ್ಲಿ ನಡೆಯಲಿರುವ ಕ್ರಿಕೆಟ್‌ ವಿಶ್ವ ಕಪ್‌ ಲೀಗ್ 2 ಸರಣಿಗೆ ಸಿದ್ಧತೆ ನಡೆಸಲು ನೇಪಾಳ ಕ್ರಿಕೆಟ್‌ ತಂಡವು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದೆ.

ಎರಡು ವಾರ ಬೆಂಗಳೂರಿನಲ್ಲಿ ತರಬೇತಿ ಪಡೆದ ನಂತರ ತಂಡವು ಕೆನಡಾದಲ್ಲಿ ಮೂರು ರಾಷ್ಟ್ರಗಳ ಸರಣಿಯನ್ನು ಆಡಲಿದೆ. ಒಮಾನ್ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಇನ್ನೊಂದು ತಂಡ. ಲೀಗ್2 ಪಾಯಿಂಟ್‌ ಪಟ್ಟಿಯಲ್ಲಿ ನೇಪಾಳ ಆರನೇ ಸ್ಥಾನದಲ್ಲಿದೆ.

ಎನ್‌ಸಿಎನಲ್ಲಿ ತರಬೇತಿ ಪಡೆಯು್ತಿರುವ ವಿಷಯವನ್ನು ನೇಪಾಳ ಕ್ರಿಕೆಟ್‌ ಸಂಸ್ಥೆ ಎಕ್ಸ್‌ನಲ್ಲಿ ಸೋಮವಾರ ಹಂಚಿಕೊಂಡಿದೆ.

ನಾಯಕ ರೋಹಿತ್‌ ಪೌದೆಲ್‌, ದೀಪೇಂದ್ರ ಸಿಂಗ್‌ ಐರಿ ಮತ್ತು ಸಂದೀಪ್‌ ಲಮಿಚಾನೆ ಸೇರಿದಂತೆ ನೇಪಾಳದ ಕೆಲವು ಪ್ರಮುಖ ಆಟಗಾರರು ಇತ್ತೀಚೆಗೆ ಕೆನಡಾದಲ್ಲಿ ನಡೆದ ಗ್ಲೋಬಲ್‌ ಟಿ20 ಲೀಗ್‌ನಲ್ಲಿ ಆಡಿದ್ದರು.

ಹೋದ ಜೂನ್‌ನಲ್ಲಿ ಟಿ20 ವಿಶ್ವಕಪ್‌ ಆಡಲು ಅಮೆರಿಕಕ್ಕೆ ಹೋಗುವ ಮೊದಲ ನೇಪಾಳ ತಂಡ ಗುಜರಾತ್‌ ಮತ್ತು ಬರೋಡಾ ತಂಡಗಳ ಎದುರು ವಾಪಿಯಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಿತ್ತು.

‘ರೈನೋಸ್‌’ (ನೇಪಾಳ ತಂಡದ ಅಡ್ಡಹೆಸರು) ತಂಡ 2026ರ ಡಿಸೆಂಬರ್‌ ಒಳಗೆ ಲೀಗ್‌ 2 ಪಾಯಿಂಟ್‌ಪಟ್ಟಿಯಲ್ಲಿ ಮೊದಲ ನಾಲ್ಕರಲ್ಲಿ ಸ್ಥಾನ ಪಡೆಯುವ ಗುರಿಹೊಂದಿದೆ. ಇದರಿಂದ ತಂಡವು ವಿಶ್ವಕಪ್‌ ಕ್ವಾಲಿಫೈರ್‌ನಲ್ಲಿ ಆಡುವ ಅವಕಾಶ ಪಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT