ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈವ್‌ ಅಪ್‌ಡೇಟ್ಸ್ | ಶ್ರೀಲಂಕಾ ವಿರುದ್ಧ ಕಿವೀಸ್‌ಗೆ ಭರ್ಜರಿ ಜಯ

ವಿಶ್ವಕಪ್‌ ಕ್ರಿಕೆಟ್‌ 2019
Last Updated 1 ಜೂನ್ 2019, 14:39 IST
ಅಕ್ಷರ ಗಾತ್ರ

ಕಾರ್ಡಿಫ್:ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡನ್ಯೂಜಿಲೆಂಡ್‌ ನಡೆಸಿದ ಮಾರಕ ದಾಳಿಗೆ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ವಿಕೆಟ್‌ ಕಳೆದುಕೊಂಡರು. ನ್ಯೂಜಿಲೆಂಡ್‌ ವಿಕೆಟ್‌ ನಷ್ಟವಿಲ್ಲದೇ ಅಲ್ಪ ಮೊತ್ತದ ಗುರಿಯನ್ನು ಬಹುಬೇಗ ತಲುಪಿ ಗೆಲುವು ಸಾಧಿಸಿತು.

ಸ್ಕೋರ್‌ ವಿವರ:https://bit.ly/2wxFYng

30ನೇ ಓವರ್‌ ಮುಟ್ಟುವುದಕ್ಕೂ ಮುನ್ನವೇ ಎಲ್ಲ ವಿಕೆಟ್‌ ಕಳೆದು ಕೊಂಡ ಶ್ರೀಲಂಕಾ, ನ್ಯೂಜಿಲೆಂಡ್‌ ಗೆಲುವಿಗೆ 137ರನ್‌ಗಳ ಅಲ್ಪಮೊತ್ತದ ಗುರಿ ನೀಡಿತ್ತು.ಮಾರ್ಟಿನ್ ಗಪ್ಟಿಲ್ ಹಾಗೂಕಾಲಿನ್ ಮನ್ರೊ ಬ್ಯಾಟಿಂಗ್‌ ನಾಗಾಲೋಟಕ್ಕೆ ಲಂಕಾ ಬೌಲರ್‌ಗಳು ಕಡಿವಾಣ ಹಾಕಲು ಸಾಧ್ಯವೇ ಆಗಲಿಲ್ಲ. ಇಬ್ಬರೂ ಆಟಗಾರರ ಅರ್ಧ ಶತಕದ ನೆರವಿನಿಂದ 16.1 ಓವರ್‌ಗಳಲ್ಲಿಯೇ ನ್ಯೂಜಿಲೆಂಡ್‌ ಗೆಲುವಿನ ದಡ ಸೇರಿತು.

7:30- ಸ್ಕೋರ್‌:ಮಾರ್ಟಿನ್ ಗಪ್ಟಿಲ್–73 ರನ್‌ (51 ಎಸೆತ), 8 ಬೌಂಡರಿ, 2 ಸಿಕ್ಸರ್‌;ಕಾಲಿನ್ ಮನ್ರೊ–58 ರನ್‌(47 ಎಸೆತ), 6 ಬೌಂಡರಿ, 1 ಸಿಕ್ಸರ್‌

7:26– ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು. 16.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 137 ರನ್‌.

(ಸೋಲಿನ ನಡುವೆಯೂ ಕುಣಿದು ಸಂಭ್ರಮಿಸಿದ ಶ್ರೀಲಂಕಾ ಅಭಿಮಾನಿಗಳು)

7:13– ಎರಡು ಸಿಕ್ಸರ್‌, 6 ಬೌಂಡರಿ ಒಳಗೊಂಡ 60 ರನ್‌(45 ಎಸೆತ) ಗಳಿಸಿರುವಮಾರ್ಟಿನ್ ಗಪ್ಟಿಲ್ ಹಾಗೂ 6 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಂತೆ 56 ರನ್‌(45 ಎಸೆತ) ಗಳಿಸಿರುವಕಾಲಿನ್ ಮನ್ರೊ, ಶ್ರೀಲಂಕಾ ಬೌಲರ್‌ಗಳನ್ನು ದಂಡಿಸುವುದನ್ನು ಮುಂದುವರಿಸಿದ್ದಾರೆ.

7:10–ನ್ಯೂಜಿಲೆಂಡ್‌: 14 ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 109 ರನ್‌ ಗಳಿಸಿದೆ

7:06–ಈಗಾಗಲೇ ಅರ್ಧ ಶತಕ ಪೂರೈಸಿರುವಗಪ್ಟಿಲ್(51) ಮತ್ತುಮನ್ರೊ(55);ಇಬ್ಬರೂ ಬ್ಯಾಟ್ಸ್‌ಮನ್‌ಗಳು ಜಿದ್ದಿಗೆ ಬಿದ್ದವರ ಹಾಗೆ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ.

7:00–ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ಬಹುಬೇಗ ಗೆಲುವಿನ ಹೊಸ್ತಿಲಲ್ಲಿದೆ.

5:37–ಶ್ರೀಲಂಕಾ: 29.2 ಓವರ್‌ಗಳಲ್ಲಿ136 ರನ್‌.ದಿಮುತ ಕರುಣಾರತ್ನೆ 52* ರನ್‌

5:36–ಲಾಕಿ ಫರ್ಗ್ಯುಸನ್ ದಾಳಿಗೆಲಸಿತ್ ಮಾಲಿಂಗ ವಿಕೆಟ್‌ ಒಪ್ಪಿಸುವ ಮೂಲಕ ಶ್ರೀಲಂಕಾ ಕೇವಲ 136 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದು ಕೊಂಡಿತು.

5:30– ಶ್ರೀಲಂಕಾ: 29 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 135 ರನ್‌

5:28– ತಾಳ್ಮೆಯ ಆಟ ಪ್ರದರ್ಶಿಸಿರುವ ಶ್ರೀಲಂಕಾ ತಂಡದನಾಯಕದಿಮುತ ಕರುಣಾರತ್ನೆ ಅರ್ಧ ಶತಕ ಪೂರೈಸಿದರು. 81 ಎಸೆತಗಳಿಗೆ 50 ರನ್‌ ಗಳಿಸಿ ಆಟ ಮುಂದುವರಿಸಿದ್ದಾರೆ.

5:24–ಟ್ರೆಂಟ್ ಬೌಲ್ಟ್ ಮೊದಲ ವಿಕೆಟ್‌ ಪಡೆಯುವ ಮೂಲಕ ಶ್ರೀಲಂಕಾದ 9ನೇ ವಿಕೆಟ್‌ ಪತನಗೊಂಡಿದೆ. ಏಳು ರನ್‌ ಗಳಿಸಿದ್ದಸುರಂಗ ಲಕ್ಮಲ್ ಕ್ಯಾಚ್‌ ಕೊಟ್ಟರು.

5:09– ಶ್ರೀಲಂಕಾ: 25 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 115 ರನ್‌

5:05–ಇಸುರು ಉಡಾನ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದು,ತಂಡ ಅಲ್ಪ ಮೊತ್ತಕ್ಕೆ ಕುಸಿರುವ ಆತಂಕದಲ್ಲಿದೆ.ಜಿಮ್ಮಿ ನಿಶಾಮ್ ಅವರಿಗೆ ಇದು ಮೊದಲ ವಿಕೆಟ್‌.

5:00– ಎರಡು ಸಿಕ್ಸರ್‌ಗಳ ಮೂಲಕ ಲಂಕಾ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದ ತಿಸಾರ ಪೆರೆರಾ,ಮಿಚೆಲ್ ಸ್ಯಾಂಟನರ್ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. 23 ಎಸೆತಗಳಲ್ಲಿ 27 ರನ್ ಗಳಿಸಿದ್ದರು.ಪಂದ್ಯದಲ್ಲಿ ಈವರೆಗೂ ಎರಡು ಸಿಕ್ಸರ್‌ಗಳಷ್ಟೇ ದಾಖಲಾಗಿದ್ದು, ಆ ಎರಡೂ ತಿಸಾರ ಬ್ಯಾಟ್‌ನಿಂದ ಚಿಮ್ಮಿದವೇ ಆಗಿವೆ.

4:55– ಶತಕ ಪೂರೈಸಿದ ಶ್ರೀಲಂಕಾ: 22 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 100 ರನ್‌ ಗಳಿಸಿದೆ.

4:50– ಆರು ವಿಕೆಟ್‌ ಕಳೆದು ಕೊಂಡಿರುವ ತಂಡಕ್ಕೆ ನಾಯಕದಿಮುತ ಕರುಣಾರತ್ನೆ ಆಸರೆಯಾಗಿದ್ದಾರೆ. 62 ಎಸೆತಗಳಲ್ಲಿ 37 ರನ್‌ಗಳಿಸಿ ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದಾರೆ. ಕರುಣಾರತ್ನೆ ಅವರೊಂದಿಗೆ ಎಂಟನೇ ಕ್ರಮಾಂಕದಲ್ಲಿ ಜತೆಯಾಗಿರುವತಿಸಾರ ಪೆರೆರಾ 15 ಎಸೆತಗಳಲ್ಲಿ 19 ರನ್‌ ಗಳಿಸಿ ಉತ್ತಮ ಆಟವಾಡುತ್ತಿದ್ದಾರೆ.

ತಿಸಾರ ಪೆರೆರಾ ಆಟದ ವೈಖರಿ
ತಿಸಾರ ಪೆರೆರಾ ಆಟದ ವೈಖರಿ

4:45– ನ್ಯೂಜಿಲೆಂಡ್‌ ಪರ ವಿಕೆಟ್‌ ಗಳಿಸಿದವರು: ಮ್ಯಾಟ್‌ ಹೆನ್ರಿ– 3 ವಿಕೆಟ್‌(29ರನ್‌);ಲಾಕಿ ಫರ್ಗ್ಯುಸನ್–2 ವಿಕೆಟ್‌(12ರನ್‌) ;ಕಾಲಿನ್ಡಿ ಗ್ರ್ಯಾಂಡ್‌ಹೋಮ್– 1 ವಿಕೆಟ್‌(14ರನ್‌)

4:35–ತಿಸಾರ ಪೆರೆರಾ ಪಂದ್ಯದ ಮೊದಲ ಸಿಕ್ಸರ್‌ ಬಾರಿಸಿದರು. 18 ಓವರ್‌ ಮುಕ್ತಾಯಕ್ಕೆ 6 ವಿಕೆಟ್‌ ಕಳೆದುಕೊಂಡಿರುವ ಶ್ರೀಲಂಕಾ 82 ರನ್‌ ಗಳಿಸಿದೆ. ತಿಸಾರ ಪೆರೆರಾ(14) ಮತ್ತುದಿಮುತ ಕರುಣಾರತ್ನೆ(26) ಕ್ರೀಸ್‌ನಲ್ಲಿದ್ದಾರೆ.

4:29– 15ನೇ ಓವರ್‌ನಲ್ಲಿಲಾಕಿ ಫರ್ಗ್ಯುಸನ್ ಮತ್ತೊಂದು ವಿಕೆಟ್‌ ಪಡೆಯುವ ಮೂಲಕ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದರು. ಒಂದು ರನ್‌ ಗಳಿಸಿದ್ದ ಜೀವನ್‌ ಮೆಂಡಿಸ್‌ ವಿಕೆಟ್‌ ಕಳೆದು ಕೊಂಡರು.

4:19- 14ನೇ ಓವರ್‌ನಲ್ಲಿಕಾಲಿನ್ಡಿ ಗ್ರ್ಯಾಂಡ್‌ಹೋಮ್ ಎಸೆತದಲ್ಲಿಏಂಜೆಲೊ ಮ್ಯಾಥ್ಯೂಸ್(0) ಕ್ಯಾಚ್‌ ಕೊಟ್ಟು ಪೆವಿಲಿಯನ್‌ಗೆ ಮರಳಿದರು.

4:03– ನ್ಯೂಜಿಲೆಂಡ್‌ ಬೌಲರ್‌ಗಳ ಪರಾಕ್ರಮ ಮುಂದುವರಿದಿದ್ದು, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದಧನಂಜಯ್ ಡಿ ಸಿಲ್ವಾ ಕೇವಲ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.ಲಾಕಿ ಫರ್ಗ್ಯುಸನ್ ಎಸೆತದಲ್ಲಿಧನಂಜಯ್‌ ಎಲ್‌ಬಿಡಬ್ಲ್ಯು ಆದರು.

4:02–ಮೊದಲ ಪವರ್‌ ಪ್ಲೇ ಅಂತ್ಯಗೊಂಡಿದ್ದು, ಶ್ರೀಲಂಕಾ 11.5ಓವರ್‌ಗಳಲ್ಲಿ 4ವಿಕೆಟ್‌ ನಷ್ಟಕ್ಕೆ 53 ರನ್‌ ಗಳಿಸಿದೆ.

3:51:ಮ್ಯಾಟ್ ಹೆನ್ರಿ ಎಸೆತ ಮೋಡಿಗೆ ಸಿಲುಕಿರುವ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸುತ್ತಿದ್ದಾರೆ. ಎಂಟನೇ ಓವರ್‌ನಲ್ಲಿ ಹೆನ್ರಿ ಪ್ರಮುಖ ಎರಡು ವಿಕೆಟ್‌ ಕಬಳಿಸಿದರು. ಉತ್ತಮ ಪ್ರದರ್ಶನ ತೋರುತ್ತಿದ್ದ ಕುಶಾಲ್ಪರೇರ(29) ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಶಾಲ್‌ಮೆಂಡಿಸ್ ಶೂನ್ಯಕ್ಕೆ ವಿಕೆಟ್‌ ಕಳೆದು ಕೊಂಡರು.

3:50- ಒಂಬತ್ತನೇ ಓವರ್‌ ಮುಕ್ತಾಯಕ್ಕೆ 50 ರನ್‌ ಕಲೆಹಾಕಿರುವಶ್ರೀಲಂಕಾ 3 ವಿಕೆಟ್‌ ಕಳೆದು ಕೊಂಡಿದೆ.

3:43- ಶ್ರೀಲಂಕಾ: 8 ಓವರ್‌ ಮುಕ್ತಾಯಕ್ಕೆ 46 ರನ್‌(1 ವಿಕೆಟ್‌)

3:40- ಉತ್ತಮ ಬ್ಯಾಟಿಂಗ್‌ ಮಾಡುತ್ತಿರುವಕುಶಾಲ್ ಪರೇರ, ನಾಲ್ಕು ಬೌಂಡರಿಯೊಂದಿಗೆ 21 ಎಸೆತಗಳಲ್ಲಿ 26 ರನ್‌ ಗಳಿಸಿದ್ದಾರೆ.

ಬ್ಯಾಟಿಂಗ್‌ ನಡೆಸಿರುವಶ್ರೀಲಂಕಾಲಾಹಿರು ತಿರಿಮನ್ನೆ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿದೆ. 4.2 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 25 ರನ್‌ ಗಳಿಸಿದೆ.

ತಂಡಗಳ ಆಟಗಾರರು–

ನ್ಯೂಜಿಲೆಂಡ್:

ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಹೆನ್ರಿ ನಿಕೋಲ್ಸ್‌, ಮಿಚೆಲ್ ಸ್ಯಾಂಟನರ್, ಈಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್

ಶ್ರೀಲಂಕಾ:

ದಿಮುತ ಕರುಣಾರತ್ನೆ (ನಾಯಕ), ಧನಂಜಯ್ ಡಿ ಸಿಲ್ವಾ, ಅವಿಷ್ಕಾ ಫರ್ನಾಂಡೊ, ಸುರಂಗ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ ಮೆಂಡಿಸ್, ಜೀವನ್ ಮೆಂಡಿಸ್, ಕುಶಾಲ್ ಪರೇರ, ತಿಸಾರ ಪೆರೆರಾ, ನುವಾನ ಪ್ರದೀಪ್, ಮಿಲಿಂದ್ ಸಿರಿವರ್ಧನ, ಲಾಹಿರು ತಿರಿಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT