ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಕದಿನ ಕ್ರಿಕೆಟ್‌: ಗೆಲುವಿನತ್ತ ಮಿಥಾಲಿ ಬಳಗದ ಚಿತ್ತ

ಭಾರತ–ನ್ಯೂಜಿಲೆಂಡ್ ಹಣಾಹಣಿ ಇಂದು
Last Updated 31 ಜನವರಿ 2019, 20:15 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡು ಆತ್ಮವಿಶ್ವಾಸದಲ್ಲಿ ನಲಿಯುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಶುಕ್ರವಾರ ನ್ಯೂಜಿಲೆಂಡ್ ಎದುರು ಮೂರನೇ ಪಂದ್ಯ ಆಡಲಿದೆ.

ಸರಣಿಯ ಕೊನೆಯ ಪಂದ್ಯ ಇದಾಗಿದೆ. ಇದನ್ನು ಜಯಿಸುವ ಮೂಲಕ 3–0ಯಿಂದ ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ಛಲದಲ್ಲಿದೆ.

ನಾಯಕಿ ಮಿಥಾಲಿ ರಾಜ್, ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಹೋದ ಎರಡೂ ಪಂದ್ಯಗಳಲ್ಲಿ ಮಿಂಚಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಇವರಿಬ್ಬರೂ ಕಿವೀಸ್ ಬೌಲರ್‌ಗಳಿಗೆ ಮತ್ತೊಮ್ಮೆ ತಲೆನೋವಾಗುವ ಸಾಧ್ಯತೆಗಳು ಹೆಚ್ಚು.

ಬೌಲಿಂಗ್‌ನಲ್ಲಿ ಅನುಭವಿ ಮಧ್ಯಮವೇಗಿ ಜೂಲನ್ ಗೋಸ್ವಾಮಿ, ದೀಪ್ತಿ, ಏಕತಾ ಅವರು ಕೂಡ ಚೆನ್ನಾಗಿ ಆಡಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಸಾಮರ್ಥ್ಯ ಈ ಬೌಲರ್‌ಗಳಿಗೆ ಇದೆ.

ನೂತನ ಕೋಚ್ ಡಬ್ಲ್ಯು. ವಿ. ರಾಮನ್ ಅವರ ಮಾರ್ಗದರ್ಶನದಲ್ಲಿ ತಂಡವು ಉತ್ತಮವಾಗಿ ಆಡುತ್ತಿದೆ. ಯುವ ಅಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರು ಲಯಕ್ಕೆ ಮರಳಿದರೆ ುತ್ತಮ ಆರಂಭ ಸಿಗುವುದು ಖಚಿತ.

ಎರಡೂ ಪಂದ್ಯಗಳಲ್ಲಿ ಆತಿಥೇಯ ತಂಡದ ನಾಯಕಿ ಏಮಿ ಸೆಟ್ಟರ್‌ವೇಟ್ ಅವರೊಬ್ಬರೇ ಏಕಾಂಗಿ ಹೋರಾಟ ನಡೆಸಿದ್ದರು. ಉಳಿದ ಆಟಗಾರ್ತಿಯರು ನಿರೀಕ್ಷಿತ ಮಟ್ಟಕ್ಕೆ ಆಡದಿದ್ದರೆ ಗೆಲುವಿನ ಹಾದಿ ಕಠಿಣವಾಗಲಿದೆ.

ತಂಡಗಳು ಇಂತಿವೆ: ಭಾರತ: ಮಿಥಾಲಿ ರಾಜ್ (ನಾಯಕಿ), ತಾನ್ಯಾ ಭಾಟಿಯಾ (ವಿಕೆಟ್‌ಕೀಪರ್), ಏಕ್ತಾ ಬಿಷ್ಠ್, ರಾಜೇಶ್ವರಿ ಗಾಯಕವಾಡ್, ಜೂಲನ್ ಗೋಸ್ವಾಮಿ, ದಯಾಳನ್ ಹೇಮಲತಾ, ಮಾನಸಿ ಜೋಶಿ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ಮೊನಾ ಮೆಷ್ರಮ್, ಶಿಖಾ ಪಾಂಡೆ, ಪೂನಮ್ ರಾವುತ್, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಪೂನಮ್ ಯಾದವ್.

ನ್ಯೂಜಿಲೆಂಡ್: ಏಮಿ ಸೆಟ್ಟರ್‌ವೇಟ್ (ನಾಯಕಿ), ಸೂಝೀ ಬೇಟ್ಸ್‌, ಬರ್ನೆಡೈನ್, ಬಿಝೂಐಡೆನೌಟ್ (ವಿಕೆಟ್‌ಕೀಪರ್), ಸೋಫಿ ಡಿವೈನ್, ಲಾರೆನ್ ಡೌನ್, ಮ್ಯಾಡಿ ಗ್ರೀನ್, ಹಾಲಿ ಹಡ್ಡಲ್ಸ್‌ಟನ್, ಲೀ ಕಾಸ್ಪೆರಕ್, ಅಮೆಲಿಯಾ ಕೆರ್, ಕೇಟಿ ಪಾರ್ಕಿನ್ಸ್, ಅನ್ನಾ ಪೀಟರ್ಸನ್, ಹನ್ನಾ ರೋಯಿ, ಲೀತಹುಹು.

ಪಂದ್ಯ ಆರಂಭ: ಬೆಳಿಗ್ಗೆ
ನೇರಪ್ರಸಾರ : ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT