ಕೊಲಂಬೊ: ಲಂಕನ್ ಪ್ರೀಮಿಯರ್ ಲೀಗ್ ವೇಳೆ ಉದ್ದೀಪನ ಮದ್ದುಸೇವನೆ ತಡೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ರಾಷ್ಟ್ರೀಯ ತಂಡದ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಅವರನ್ನು ಶ್ರೀಲಂಕಾ ಕ್ರಿಕೆಟ್ ಅಮಾನತು ಮಾಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಗಾಲೆ ಮಾರ್ವೆಲ್ಸ್ ತಂಡಕ್ಕೆ ಈ ಎಡಗೈ ಆಟಗಾರ ನಾಯಕರಾಗಿದ್ದರು.
‘ಅಮಾನತು ಆದೇಶ ಶುಕ್ರವಾರದಿಂದಲೇ ಜಾರಿಗೆ ಬಂದಿದ್ದು, ಮುಂದಿನ ಸೂಚನೆವರೆಗೆ ಮುಂದುವರಿಯಲಿದೆ. ಕ್ರೀಡೆಯಲ್ಲಿ ಡೋಪಿಂಗ್ ಕಳಂಕ ತೊಡೆದುಹಾಕುವ ಭಾಗವಾಗಿ ಲಂಕಾ ಪ್ರೀಮಿಯರ್ ಲೀಗ್ ವೇಳೆ ಮದ್ದುಸೇವನೆ ಪರೀಕ್ಷೆ ನಡೆಸಲಾಗಿತ್ತು‘ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿಕೆ ತಿಳಿಸಿದೆ.
31 ವರ್ಷದ ನಿರೋಶನ್ 2023ರ ಮಾರ್ಚ್‌ನಲ್ಲಿ ಕೊನೆಯ ಬಾರಿ ಶ್ರೀಲಂಕಾ ತಂಡಕ್ಕೆ ಆಡಿದ್ದರು.