ಮುಂಬೈ: ಕಳಪೆ ಬ್ಯಾಟಿಂಗ್ ಲಯದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರಿಗೆ ಮುಂಬೈ ರಣಜಿ ತಂಡದ ನಾಯಕ ಅಜಿಂಕ್ಯ ರಹಾನೆ ಬೆಂಬಲ ಸೂಚಿಸಿದ್ದಾರೆ.

'ರೋಹಿತ್ಗೆ ಏನು ಮಾಡಬೇಕೆಂದು ಯಾರೂ ಹೇಳಬೇಕಾಗಿಲ್ಲ. ಸದ್ಯದಲ್ಲೇ ದೊಡ್ಡ ಮೊತ್ತ ಪೇರಿಸಲಿದ್ದಾರೆ' ಎಂದು ರಹಾನೆ ಪ್ರತಿಕ್ರಿಯಿಸಿದ್ದಾರೆ.

ಸರಿ ಸುಮಾರು ಒಂದು ದಶಕದ ಬಳಿಕ ರಣಜಿ ಟ್ರೋಫಿ ಕ್ರಿಕೆಟ್ಗೆ ರೋಹಿತ್ ಮರಳಿದ್ದಾರೆ. ಇದರೊಂದಿಗೆ ಎಲ್ಲರ ದೃಷ್ಟಿ 'ಹಿಟ್ಮ್ಯಾನ್' ಮೇಲೆ ನೆಟ್ಟಿದೆ.

'ನಮಗೆಲ್ಲರಿಗೂ ರೋಹಿತ್ ಬಗ್ಗೆ ಗೊತ್ತಿದೆ. ಅವರ ವ್ಯಕ್ತಿತ್ವದ ಬಗ್ಗೆಯೂ ತಿಳಿದಿದೆ. ಮುಂಬೈ ಡ್ರೆಸ್ಸಿಂಗ್ ರೂಮ್ಗೆ ರೋಹಿತ್ ಮರಳಿರುವುದು ನಮಗೆಲ್ಲರಿಗೂ ಸಂತಸ ತಂದಿದೆ' ಎಂದು ಅವರು ಹೇಳಿದ್ದಾರೆ.

'ರೋಹಿತ್ ಯಾವಾಗಲೂ ರಿಲ್ಯಾಕ್ಸ್ ಆಗಿರುತ್ತಾರೆ. ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್ನಲ್ಲೂ ಅದೇ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದಾರೆ. ಅವರ ಆಟದ ಬಗ್ಗೆಯೂ ನಮಗೆಲ್ಲರಿಗೂ ಗೊತ್ತಿದೆ. ಹಾಗಾಗಿ ಅವರೇನು ಮಾಡಬೇಕೆಂದು ಯಾರೂ ಹೇಳಬೇಕಿಲ್ಲ' ಎಂದು ಹೇಳಿದ್ದಾರೆ.

'ರೋಹಿತ್ ಶೀಘ್ರದಲ್ಲೇ ಲಯಕ್ಕೆ ಮರಳುವ ನಂಬಿಕೆ ನಮಗಿದೆ. ಅವರು ಯಾವತ್ತೂ ಬದಲಾಗಿಲ್ಲ. ಅದುವೇ ಒಳ್ಳೆಯ ವಿಷಯ' ಎಂದು 37 ವರ್ಷದ ರೋಹಿತ್ ಬಗ್ಗೆ ರಹಾನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಪ್ರತಿಯೊಬ್ಬ ಆಟಗಾರನೂ ತನ್ನ ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಕಾಣುತ್ತಾನೆ. ಅಭ್ಯಾಸದ ಅವಧಿಯಲ್ಲಿ ರೋಹಿತ್ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ' ಎಂದು ರಹಾನೆ ತಿಳಿಸಿದ್ದಾರೆ.

ಮುಂಬೈ ತಂಡದ ಜಮ್ಮು ಮತ್ತು ಕಾಶ್ಮೀರದ ವಿರುದ್ಧದ ರಣಜಿ ಪಂದ್ಯವು ಭಾನುವಾರ (ಜ.23) ಆರಂಭವಾಗಲಿದೆ.
.ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ನಾಳೆ: ಶಮಿ ನಿರ್ವಹಣೆಯ ಮೇಲೆ ಗಮನ.ಚಾಂಪಿಯನ್ಸ್ ಟ್ರೋಫಿಗೆ ಕೈಬಿಟ್ಟಿದ್ದರಿಂದ ಬೇಸರವಿಲ್ಲ: ಸೂರ್ಯ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.