ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020 ಮುಂದೂಡಿಕೆ | ಯಾರ ಬಳಿಯೂ ಬೇರೆ ಆಯ್ಕೆಗಳಿರಲಿಲ್ಲ ಎಂದ ಗಂಗೂಲಿ

Last Updated 14 ಮಾರ್ಚ್ 2020, 5:12 IST
ಅಕ್ಷರ ಗಾತ್ರ

ಮುಂಬೈ:ಐಪಿಎಲ್‌–2020 ಟೂರ್ನಿ ಮುಂದೂಡಿಕೆ ನಂತರ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ಬೇರೆ ಆಯ್ಕೆಗಳೇ ಇಲ್ಲ ಎಂದು ಹೇಳಿದ್ದಾರೆ. ಈ ಬಾರಿಯ ಟೂರ್ನಿಯು ಇದೇ ತಿಂಗಳು 29ರಿಂದ ಆರಂಭವಾಗಬೇಕಿತ್ತು. ಆದರೆ, ಕೋವಿಡ್‌–19 ವೈರಸ್‌ ಭೀತಿಯಿಂದಾಗಿ ಏಪ್ರಿಲ್‌ 15ರ ವರೆಗೆ ಮುಂದೂಡಲಾಗಿದೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಗಂಗೂಲಿ,‘ಸದ್ಯ ನಾವು ಟೂರ್ನಿ ಮುಂದೂಡಿಕೆ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ಮುಂದೆ ಏನಾಗಲಿದೆ ಎಂಬುದನ್ನು ಕಾದುನೋಡುತ್ತೇವೆ. ಟೂರ್ನಿ ಕುರಿತು ಈಗಲೇ ಯಾವ ಪ್ರತಿಕ್ರಿಯೆಯನ್ನೂ ನೀಡಲಾಗದು. ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹಾಗಾಗಿಯೇ ಟೂರ್ನಿಯನ್ನು ಮುಂದೂಡಲಾಯಿತು’ ಎಂದು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಐಪಿಎಲ್ಪಂದ್ಯಗಳಿಗೆ ದೆಹಲಿ ಸರ್ಕಾರ ಗುರುವಾರ ನಿಷೇಧ ಹೇರಿತ್ತು. ಅದಾದ ಬಳಿಕ ಬಿಸಿಸಿಐ ಮುಂದೂಡಿಕೆ ನಿರ್ಧಾರ ಪ್ರಕಟಿಸಿತ್ತು. ‘ಈ ನಿರ್ಧಾರವು ತಮಗೆ ಸಮಾಧಾನ ನೀಡಿದೆಯೆ?’ಎಂಬ ಪ್ರಶ್ನೆಗೆಪ್ರತಿಕ್ರಿಯಿಸಿದ ಅವರು, ‘ಯಾರ ಬಳಿಯೂ ಬೇರೆ ಆಯ್ಕೆಗಳಿರಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ ಸುಮಾರು 80ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ಹಾಗೂ ಇಬ್ಬರನ್ನು ಬಲಿ ಪಡೆದಿರುವ ಕೋವಿಡ್‌–19 ವೈರಸ್‌ ಭೀತಿಯಿಂದಾಗಿ ಭಾರತ–ದಕ್ಷಿಣ ಆಫ್ರಿಕಾ ಏಕದಿನ ಸರಣಿ, ಶ್ರೀಲಂಕಾ–ಇಂಗ್ಲೆಂಡ್‌ ಟೆಸ್ಟ್ ಸರಣಿ ಸೇರಿದಂತೆಹಲವು ಕ್ರೀಡಾಕೂಟಗಳೂ ರದ್ದಾಗಿವೆ.

ಪ್ರಪಂಚದಾದ್ಯಂತ ಸುಮಾರು 1.3 ಲಕ್ಷ ಜನರಲ್ಲಿ ವೈರಸ್‌ ಸೋಂಕು ದೃಢಪಟ್ಟಿದ್ದು, 5 ಸಾವಿರ ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT