ಸೋಮವಾರ, ಜನವರಿ 18, 2021
15 °C

ಏಕದಿನ ಕ್ರಿಕೆಟ್‌ಗೆ ಸುವರ್ಣ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳೆಯಿಂದಾಗಿ ಕ್ರಿಕೆಟ್ ಪಂದ್ಯಗಳು ರದ್ದಾದ ಘಟನೆಗಳು ಹಲವಾರಿವೆ. ಆದರೆ, ಮಳೆಯ ಕಾರಣದಿಂದಾಗಿಯೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯದ ಪರಿಕಲ್ಪನೆ ಹುಟ್ಟಿದ ಆ ಘಟನೆಗೆ ಈಗ 50 ವರ್ಷ ತುಂಬಿದೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 1970ರ ಡಿಸೆಂಬರ್ 31ರಿಂದ 1971ರ ಜನವರಿ 4ರವರೆಗೆ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಆಯೋಜಿಸಲಾಗಿತ್ತು. ಆದರೆ, ಮಳೆಯಿಂದಾಗಿಪಂದ್ಯವು ಕೊಚ್ಚಿಹೋಯಿತು. 

ಪ್ರೇಕ್ಷಕರ ಮನರಂಜಿಸಲು ಆಸ್ಟ್ರೇ ಲಿಯಾ ಕ್ರಿಕೆಟ್ ಮಂಡಳಿಯು ಜನವರಿ 5ರಂದು 40 ಓವರ್‌ಗಳ ಪಂದ್ಯವನ್ನು ಆಯೋಜಿಸಿತು. ಇದು ಮೊಟ್ಟಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿ ಗಮನ ಸೆಳೆಯಿತು. ಅಂದು ಎಂಸಿಜಿಯಲ್ಲಿ 45ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ತಂಡವು 39.4 ಓವರ್‌ಗಳಲ್ಲಿ 190 ರನ್ ಗಳಿಸಿತು. ಆಸ್ಟ್ರೇಲಿಯಾ 35 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 191 ರನ್ ಗಳಿಸಿ ಗೆದ್ದಿತು.  119 ಎಸೆತಗಳಲ್ಲಿ 82 ರನ್‌ ಗಳಿಸಿದ್ದ ಇಂಗ್ಲೆಂಡ್‌ನ ಜಾನ್ ಎಡ್ರಿಕ್ ಪಂದ್ಯಶ್ರೇಷ್ಠ ಗೌರವ ಗಳಿಸಿದರು.

ಸೀಮಿತ ಓವರ್‌ಗಳ ಪಂದ್ಯದ ಜನಪ್ರಿಯತೆಯನ್ನು ಮನಗಂಡ ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯು 1972ರ ಆಗಸ್ಟ್‌ ನಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿತು.  ಇಂಗ್ಲೆಂಡ್ ಗೆದ್ದಿತು. 1975ರಲ್ಲಿ ಮೊಟ್ಟಮೊದಲ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನೂ ಇಂಗ್ಲೆಂಡ್ ಆಯೋಜಿಸಿತು. ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು