ಶನಿವಾರ, ಅಕ್ಟೋಬರ್ 24, 2020
25 °C

ಪಾಕಿಸ್ತಾನ– ಜಿಂಬಾಬ್ವೆ ಕ್ರಿಕೆಟ್ ಸರಣಿ 30ರಿಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ: ಜಿಂಬಾಬ್ವೆ ಮತ್ತು ಪಾಕಿಸ್ತಾನ ನಡುವಿನ ಏಕದಿನ ಸರಣಿಯ ಪಂದ್ಯಗಳು ಮುಲ್ತಾನ್ ಬದಲಿಗೆ ರಾವಲ್ಪಿಂಡಿಯಲ್ಲಿ ನಡೆಯಲಿವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ ತಿಳಿಸಿದೆ. ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳ ಸರಣಿ ಇದೇ 30ರಂದು ಆರಂಭವಾಗಲಿದೆ.

ಆಟಗಾರರ ಪ್ರಯಾಣಕ್ಕೆ ಆಗುವ ತೊಂದರೆ ಮತ್ತು ಕೆಲವು ತಾಂತ್ರಿಕ ಸಮಸ್ಯೆಗಳನ್ನು ತ‍‍ಪ್ಪಿಸುವುದಕ್ಕಾಗಿ ಈ ಬದಲಾವಣೆ ಮಾಡಲಾಗಿದೆ. ಏಕದಿನ ಪಂದ್ಯಗಳ ಸ್ಥಳವನ್ನು ಬದಲಿಸಿದ್ದರಿಂದ ಟ್ವೆಂಟಿ–20 ಪಂದ್ಯಗಳನ್ನು ಕೂಡ ಸ್ಥಳಾಂತರಿಸಲಾಗಿದ್ದು ರಾವಲ್ಪಿಂಡಿ ಬದಲಿಗೆ ಲಾಹೋರ್‌ನಲ್ಲಿ ನಡೆಯಲಿವೆ ಎಂದು ಮಂಡಳಿ ವಿವರಿಸಿದೆ. 

ಅಕ್ಟೋಬರ್ 30ರಂದು ಮೊದಲ ಏಕದಿನ ಪಂದ್ಯ, ನವೆಂಬರ್ ಒಂದು ಮತ್ತು ಮೂರರಂದು ಕ್ರಮವಾಗಿ ಎರಡು ಹಾಗೂ ಮೂರನೇ ಪಂದ್ಯ ನಡೆಯಲಿದೆ. ನವೆಂಬರ್‌ 7,8 ಮತ್ತು 10ರಂದು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ.

ಭಾರತದ ಲಾಲ್ ಚಂದ್‌ ರಜಪೂತ್ ಕೋಚ್ ಆಗಿರುವ ಜಿಂಬಾಬ್ವೆ ಇದೇ ತಿಂಗಳ 21ರಿಂದ 27ರ ವರೆಗೆ ಪ್ರತ್ಯೇಕವಾಸದಲ್ಲಿ ಇರಲಿದ್ದು 28ರಂದು ಪಿಂಡಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದೆ. ತಂಡವನ್ನು ಚಾಮು ಚಿಬಾಬ ಮುನ್ನಡೆಸುತ್ತಿದ್ದಾರೆ. ಮೂರು ಟೆಸ್ಟ್, 104 ಏಕದಿನ ಮತ್ಉತ 33 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಅವರು 2016ರಿಂದ ತಂಡದ ಸದಸ್ಯರಾಗಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದಾರೆ.

ಜಿಂಬಾಬ್ವೆ ತಂಡ: ಚಾಮು ಚಿಬಾಬ (ನಾಯಕ), ಫರಾಜ್ ಅಕ್ರಮ್, ರಯಾನ್ ಬರ್ಲ್‌, ಬ್ರಯಾನ್ ಚಾರಿ, ತೆಂಡೈ ಚಟಾರ, ಎಲ್ಟನ್ ಚಿಗುಂಬುರ, ತೆಂಡೈ ಚಿಸೋರೊ, ಕ್ರೆಗ್ ಎರ್ವಿನ್, ತಿನ್ಶೆ ಕಮುನುಕಮ್ವೆ, ವೆಸ್ಲಿ ಮಧೆವೆರೆ, ವೆಲಿಂಗ್ಟನ್ ಮಸಾಕಾಂಜ, ಕರ್ಲ್‌ ಮುಂಬಾ, ರಿಚ್ಮಂಡ್ ಮುಟುಂಬಮಿ, ಬ್ಲೆಸಿಂಗ್ ಮುಜರಬನಿ, ರಿಚರ್ಡ್ ಗರಾಯ, ಸಿಕಂದರ್ ರಜಾ, ಮಿಲ್ಟನ್ ಶುಂಬ, ಬ್ರೆಂಡನ್ ಟೇಲರ್, ಡೊನಾಲ್ಡ್ ತಿರಿಪಾನೊ, ಸೀನ್ ವಿಲಿಯಮ್ಸ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು