ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದಿನ ಐಪಿಎಲ್ ಆಡುವೆನು; ಜಿಂಬಾಬ್ವೆ ವೇಗಿಯ ಹಳೆಯ ಟ್ವೀಟ್ ವೈರಲ್!

Last Updated 24 ಏಪ್ರಿಲ್ 2021, 11:08 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡುವುದು ಕೇವಲ ಭಾರತೀಯರಿಗಷ್ಟೇ ಅಲ್ಲ, ವಿದೇಶಿ ಆಟಗಾರರ ಪಾಲಿಗೂ ಕನಸಿನ ವಿಷಯವಾಗಿದೆ.

ಪಾಕಿಸ್ತಾನ ವಿರುದ್ಧ ಐತಿಹಾಸಿಕ ಟ್ವೆಂಟಿ-20 ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಂಬಾಬ್ವೆ ವೇಗದ ಬೌಲರ್ ಲೂಕ್ ಜೊಂಗ್ವೆ ನಾಲ್ಕು ವರ್ಷಗಳ ಹಿಂದೆ ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ.

'ಮುಂದೊಂದು ದಿನ ನಾನು ಐಪಿಎಲ್ ಆಡಲಿದ್ದೇನೆ' ಎಂದು ಲೂಕ್ ಜೊಂಗ್ವೆ 2017ರಲ್ಲಿ ಟ್ವೀಟ್ ಮಾಡಿದ್ದರು. ಪ್ರಸ್ತುತ ಟ್ವೀಟ್‌ಗೀಗ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಜಿಂಬಾಬ್ವೆ ಒಡ್ಡಿದ 119 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ಕೇವಲ 99 ರನ್‌ಗಳಿಗೆ ಆಲೌಟಾಗಿತ್ತು. ಈ ಮೂಲಕ 10 ರನ್ ಅಂತರದಿಂದ ಸೋಲಿಗೆ ಶರಣಾಗಿತ್ತು. ಮಾರಕ ದಾಳಿ ಸಂಘಟಿಸಿದ ಲೂಕ್ ಜೊಂಗ್ವೆ 3.5 ಓವರ್‌ಗಳಲ್ಲಿ ಕೇವಲ 18 ನರ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದರು. ಪಾಕ್ ಪರ ನಾಯಕ ಬಾಬರ್ ಆಜಂ 45 ರನ್ ಗಳಿಸಿದ್ದರು.

ಏತನ್ಮಧ್ಯೆ ವಿಕೆಟ್ ಪಡೆದ ಬಳಿಕ ಲೂಕ್ ಜೊಂಗ್ವೆ ವಿಶಿಷ್ಟ ರೀತಿಯ ಸಂಭ್ರಮಾಚರಣೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ವಿಕೆಟ್ ಪಡೆದ ಬಳಿಕ ಕಾಲಿನಿಂದ ಶೂ ತೆಗೆದು ಕಿವಿಯ ಬಳಿಯಿಟ್ಟು ಫೋನಲ್ಲಿ ಮಾತನಾಡುವ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಅಂದ ಹಾಗೆ ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ ಇದನ್ನು ಮೊದಲ ಬಾರಿಗೆ ಪರಿಚಿಯಿಸಿದ್ದರು. ಅಲ್ಲದೆ ಲೂಕ್ ಜೊಂಗ್ವೆ ತಮ್ಮನ್ನು ಅನುಕರಿಸಿರುವುದನ್ನು ನೋಡಿ ಪ್ರಭಾವಿತರಾಗಿದ್ದು, ಪಂದ್ಯವನ್ನು ಆನಂದಿಸುವಂತೆ ಸಲಹೆ ಮಾಡಿದ್ದಾರೆ.

ಅತ್ತ ಜಿಂಬಾಬ್ವೆ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದೆ. ಕ್ರೀಡಾಭಿಮಾನಿಗಳು ಪಾಕಿಸ್ತಾನ ತಂಡದ ಕೆಟ್ಟ ಪ್ರದರ್ಶನಕ್ಕೆ ಟ್ರೋಲ್ ಅಭಿಷೇಕ ಮಾಡುವ ಮೂಲಕ ತಕ್ಕ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT