ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್ ಬೌಲರ್ ಶಾಹೀನ್ ಅಫ್ರಿದಿಗೆ ಶಾಹೀದ್ ಅಫ್ರಿದಿ ಪುತ್ರಿ ಜೊತೆ ನಿಶ್ಚಿತಾರ್ಥ

Published : 7 ಮಾರ್ಚ್ 2021, 3:26 IST
ಫಾಲೋ ಮಾಡಿ
Comments

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಅಫ್ರಿದಿ ಅಲ್ಲಿನ ಸೆಲೆಬ್ರಿಟಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಮಗಳ ಜತೆ ವಿವಾಹಕ್ಕೆ ಮುಂದಾಗಿದ್ದಾರೆ.

ಈ ಸಂಗತಿಯನ್ನು ಉಭಯ ಕುಟುಂಬಗಳು ಕೂಡ ದೃಢಪಡಿಸಿದ್ದು, ಅಫ್ರಿದಿಯ ಹಿರಿಯ ಮಗಳು ಅಕ್ಸಾ ಅಫ್ರಿದಿ ಜತೆ ಶಾಹೀನ್ ಅಫ್ರಿದಿಯ ವಿವಾಹ ನಿಶ್ಚಿತಾರ್ಥ ಶೀಘ್ರದಲ್ಲೇ ನೆರವೇರಲಿದೆ ಎಂದಿದ್ದಾರೆ.

ಶಾಹೀನ್ ಅಫ್ರಿದಿಯ ತಂದೆ ಅಯಾಝ್ ಖಾನ್, ಶಾಹೀದ್ ಅಫ್ರಿದಿ ಕುಟುಂಬದ ಜತೆ ಸಮಾಲೋಚಿಸಿ, ವಿವಾಹ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಶಾಹೀದ್ ಅಫ್ರಿದಿ ಕುಟುಂಬ ಸಮ್ಮತಿಸಿದ್ದು, ಶಾಹೀನ್ ಮತ್ತು ಅಕ್ಸಾ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆದಿದೆ.

ಶಾಹೀನ್ ಮತ್ತು ಅಕ್ಸಾ ವಿವಾಹ ದೃಢಪಡುತ್ತಿದ್ದಂತೆ ಟ್ವಿಟರ್‌ನಲ್ಲಿ ಕೂಡ ಟ್ರೆಂಡ್ ಆಗಿದ್ದು, ಇಬ್ಬರೂ ಕೂಡ ಅಫ್ರಿದಿ ಕುಟುಂಬಕ್ಕೆ ಸೇರಿದವರು, ಅಲ್ಲದೆ, ಇಬ್ಬರ ವಯಸ್ಸು ಕೂಡ ಒಂದೇ ಎಂದು ನೆಟ್ಟಿಗರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಶಾಹೀನ್ ಅಫ್ರಿದಿ, 2018 ರಿಂದ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಅವರ ಬೌಲಿಂಗ್ ಶೈಲಿಗೆ ಕ್ರಿಕೆಟ್ ಲೋಕದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT