ಸೋಮವಾರ, ಮಾರ್ಚ್ 30, 2020
19 °C

ಭ್ರಷ್ಟಾಚಾರ ನಿಯಮ ಉಲ್ಲಂಘನೆ: ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಅಮಾನತು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭ್ರಷ್ಟಾಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಉಮರ್‌ ಅಕ್ಮಲ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಲಿಯು (ಪಿಸಿಬಿ) ಅಮಾನತು ಮಾಡಿದೆ. ಪ್ರಕರಣದ ತನಿಖೆ ಪೂರ್ಣಗೊಳ್ಳುವವರಗೆ ಪಾಕಿಸ್ತಾನ ಸೂಪರ್ ಲೀಗ್‌ ಅನ್ನೂ (ಪಿಎಸ್‌ಎಲ್‌) ಒಳಗೊಂಡು ಯಾವುದೇ ಟೂರ್ನಿಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ.

‘ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಸಂಬಂಧ ಯಾವುದೇ ಪಿಸಿಬಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಪಿಸಿಬಿ ಪ್ರಕಟಣೆ ಹೊರಡಿಸಿದೆ.

ಅಕ್ಮಲ್‌, ಪಿಎಸ್‌ಎಲ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡದ ಪರವಾಗಿ ಆಡುತ್ತಾರೆ. ಇದೀಗ ಅವರನ್ನು ಅಮಾನತು ಮಾಡಿರುವುದರಿಂದ, ಕ್ವೆಟ್ಟಾ ಪ್ರಾಂಚೈಸ್‌ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ. ‘ಉಮರ್‌ ಅಕ್ಮಲ್‌ ಬದಲು ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಕ್ವೆಟ್ಟಾ ಗ್ಲಾಡಿಯೇಟರ್ಸ್‌ಗೆ ಅವಕಾಶವಿದೆ’ ಎಂದೂ ಪಿಸಿಬಿ ಹೇಳಿದೆ.

ಲಾಹೋರ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಇದೇ ತಿಂಗಳ ಆರಂಭದಲ್ಲಿ ತರಬೇತುದಾರನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಅಕ್ಮಲ್‌, ಸ್ವಲ್ಪದರಲ್ಲೇ ಶಿಕ್ಷೆಯಿಂದ ಪಾರಾಗಿದ್ದರು.

29 ವರ್ಷದ ಅಕ್ಮಲ್‌ ಇದುವರೆಗೆ 16 ಟೆಸ್ಟ್‌, 121 ಏಕದಿನ ಮತ್ತು 84 ಟಿ20 ಪಂದ್ಯಗಳಲ್ಲಿ ಪಾಕ್‌ ತಂಡವನ್ನು ಪ್ರತಿನಿಧಿಸಿದ್ದು, ಕ್ರಮವಾಗಿ 1003 ರನ್‌, 3194 ರನ್‌ ಹಾಗೂ 1690 ರನ್ ಗಳಿಸಿದ್ದಾರೆ.

2018ರಲ್ಲಿ ದುಬೈನಲ್ಲಿ ನಡೆದಿದ್ದ ಪಿಎಸ್‌ಎಲ್‌ ಟೂರ್ನಿ ವೇಳೆ ಶಾರ್ಜೀಲ್‌ ಖಾನ್‌ ಮತ್ತು ಖಾಲಿದ್‌ ಲತೀಫ್‌ ಭ್ರಷ್ಟಾಚಾರ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದರು. ಹೀಗಾಗಿ ಅವರನ್ನು ಟೂರ್ನಿಯಿಂದ ಹೊರಹಾಕಲಾಗಿತ್ತು. ವಿಚಾರಣೆ ಬಳಿಕ ಶಾರ್ಜೀಲ್‌ಗೆ 5 ವರ್ಷ ಮತ್ತು ಲತೀಫ್‌ಗೆ 10 ವರ್ಷಗಳ ನಿಷೇಧ ವಿಧಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು