ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಿಜ್ವಾನ್‌, ಫಕಾರ್‌ ಅರ್ಧಶತಕ; ಪಾಕಿಸ್ತಾನಕ್ಕೆ ಮಣಿದ ಐರ್ಲೆಂಡ್‌

Published 13 ಮೇ 2024, 14:32 IST
Last Updated 13 ಮೇ 2024, 14:32 IST
ಅಕ್ಷರ ಗಾತ್ರ

ಡಬ್ಲಿನ್: ಮೊಹಮ್ಮದ್‌ ರಿಜ್ವಾನ್‌ ಮತ್ತು ಫಕಾರ್‌ ಜಮಾನ್‌ ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡವು ಎರಡನೇ ಟಿ20 ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ಮುಯ್ಯಿ ತೀರಿಸಿಕೊಂಡಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಆತಿಥೇಯ ತಂಡವು ಐದು ವಿಕೆಟ್‌ಗಳಿಂದ ಐತಿಹಾಸಿಕ ಜಯ ಸಾಧಿಸಿತ್ತು. ಅದು ಟಿ20 ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಐರ್ಲೆಂಡ್‌ಗೆ ದಕ್ಕಿದ ಮೊದಲ ಜಯವಾಗಿದೆ. ಇದೀಗ ಪ್ರವಾಸಿ ತಂಡವು ಸರಣಿಯನ್ನು 1–1 ಸಮಬಲಗೊಳಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್‌ ತಂಡವು ಲೋರ್ಕನ್ ಟಕ್ಕರ್‌ ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 193 ರನ್‌ ಕಲೆ ಹಾಕಿತು. ಶಹೀನ್ ಅಫ್ರಿದಿ ಮತ್ತು ಅಬ್ಬಾಸ್ ಅಫ್ರಿದಿ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್‌ ಪಡೆದು ಮಿಂಚಿದ್ದರು.

ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ರಿಜ್ವಾನ್‌ (ಔಟಾಗದೇ 75; 46ಎ, 4x6, 6x4) ಮತ್ತು ಜಮಾನ್‌ (78; 40ಎ, 4x6, 6x6) ಆಸರೆಯಾದರು. ಹೀಗಾಗಿ ತಂಡವು ಇನ್ನೂ 19 ಎಸೆತ ಬಾಕಿ ಇರುವಂತೆ ಮೂರು ವಿಕೆಟ್‌ಗೆ 195 ರನ್‌ ಗಳಿಸಿತು. ನಿರ್ಣಾಯಕ ಪಂದ್ಯ ಮಂಗಳವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌

ಐರ್ಲೆಂಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 193

ಲೋರ್ಕನ್ ಟಕ್ಕರ್‌ 51, ಹ್ಯಾರಿ ಟೆಕ್ಟರ್ 32, ಗರೆಥ್ ದೆಲಾನಿ ಔಟಾಗದೆ 28; ಶಹೀನ್ ಅಫ್ರಿದಿ 49ಕ್ಕೆ3, ಅಬ್ಬಾಸ್ ಅಫ್ರಿದಿ 33ಕ್ಕೆ 2.

ಪಾಕಿಸ್ತಾನ: 16.5 ಓವರ್‌ಗಳಲ್ಲಿ 3 ವಿಕೆಟ್‌ಗೆ 195

ಮೊಹಮ್ಮದ್‌ ರಿಜ್ವಾನ್‌ 75, ಫಕಾರ್‌ ಜಮಾನ್‌ ಔಟಾಗದೇ 78, ಆಜಂ ಖಾನ್‌ ಔಟಾಗದೇ 30.

ಪಂದ್ಯದ ಆಟಗಾರ: ಮೊಹಮ್ಮದ್‌ ರಿಜ್ವಾನ್‌.

ಫಲಿತಾಂಶ: ಪಾಕಿಸ್ತಾನಕ್ಕೆ ಏಳು ವಿಕೆಟ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT