ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಭರ್ಜರಿ ಜಯ; ಸರಣಿ ಗೆಲುವು

Last Updated 8 ನವೆಂಬರ್ 2020, 15:56 IST
ಅಕ್ಷರ ಗಾತ್ರ

ರಾವಲ್ಪಿಂಡಿ: ಎರಡನೇ ಪಂದ್ಯದಲ್ಲೂ ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ಗಳಿಸಿದ ಆತಿಥೇಯ ಪಾಕಿಸ್ತಾನ ತಂಡ ಟಿ20 ಕ್ರಿಕೆಟ್ ಸರಣಿಯನ್ನು ತನ್ನದಾಗಿಸಿಕೊಂಡಿತು. ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಆಜಂ (51; 28 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಯುವ ಆಟಗಾರ ಹೈದರ್ ಅಲಿ (ಅಜೇಯ 66; 43 ಎ, 6 ಬೌಂ, 3 ಸಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಎಂಟು ವಿಕೆಟ್‌ಗಳ ಜಯ ಸಾಧಿಸಿತು.

13‌5 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ 10 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಫಕ್ರ್ ಜಮಾನ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ಬಾಬರ್ ಮತ್ತು ಹೈದರ್ 100 ರನ್‌ಗಳ ಜೊತೆಯಾಟ ಆಡಿದರು. 20 ವರ್ಷದ ಹೈದರ್ ಅಜೇಯರಾಗಿ ಉಳಿದು ಖುಷ್ದಿಲ್ ಶಾ ಜೊತೆಗೂಡಿ ಜಯದ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. 20 ವರ್ಷದ ಹೈದರ್‌ಗೆ ಇದು ಮೂರನೇ ಪಂದ್ಯವಾಗಿದೆ.

ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹ್ಯಾರಿಸ್ ರವೂಫ್ ಮತ್ತು ಉಸ್ಮಾನ್ ಖಾದಿರ್ ನೀಡಿದ ಆಘಾತದಿಂದ ಜಿಂಬಾಬ್ವೆ ಸಂಕಷ್ಟಕ್ಕೆ ಈಡಾಯಿತು. ರಯಾನ್ ಬರ್ಲ್‌ ಮತ್ತು ವೆಸ್ಲಿ ಮೆಧೆವೆರೆ ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 20 ಓವರ್‌ಗಳಲ್ಲಿ 7ಕ್ಕೆ 134 (ಚಾಮು ಚಿಬಾಬ 15, ಸೀನ್ ವಿಲಿಯಮ್ಸ್ 13, ವೆಸ್ಲಿ ಮೆಧೆವೆರೆ 24, ರಯಾನ್ ಬರ್ಲ್ 32, ಎಲ್ಟನ್ ಚಿಗುಂಬುರ 18, ಡೊನಾಲ್ಡ್ ತಿರಿಪಾನೊ 15; ಹ್ಯಾರಿಸ್ ರವೂಫ್ 31ಕ್ಕೆ3, ಫಹೀಮ್ ಅಶ್ರಫ್‌ 20ಕ್ಕೆ1, ಉಸ್ಮಾನ್ ಖಾದಿರ್ 23ಕ್ಕೆ3); ಪಾಕಿಸ್ತಾನ: 15.1 ಓವರ್‌ಗಳಲ್ಲಿ 2ಕ್ಕೆ 137 (ಬಾಬರ್ ಆಜಂ 51, ಹೈದರ್ ಅಲಿ 66, ಖುಷ್ದಿಲ್ ಶಾ 11; ಬ್ಲೆಸಿಂಗ್ ಮುಜರಬಾನಿ 33ಕ್ಕೆ2). ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್‌ಗಳ ಜಯ; ಪಂದ್ಯಶ್ರೇಷ್ಠ: ಹೈದರ್ ಅಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT