ಕರಾಚಿ: ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಅಂತರರಾಷ್ಟ್ರೀಯ ತ್ರಿಕೋನ ಸರಣಿಗೆ ಆತಿಥ್ಯ ವಹಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ತಿಳಿಸಿದೆ. ಇದು 20 ವರ್ಷಗಳ ನಂತರ ಮೂರು ರಾಷ್ಟ್ರಗಳನ್ನು ಒಳಗೊಂಡ ದೇಶದ ಮೊದಲ ಪಂದ್ಯಾವಳಿಯಾಗಿದೆ.

ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಯ ಹೊರತಾಗಿ ಈ ಸರಣಿಗೆ ಹಸಿರು ನಿಶಾನೆ ತೋರಲಾಯಿತು ಎಂದು ಪಾಕಿಸ್ತಾನದ ಮಂಡಳಿಯು ತಿಳಿಸಿದೆ.

2009ರಲ್ಲಿ ಲಾಹೋರ್ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ದಾಳಿ ನಡೆದಿತ್ತು. ಎರಡು ವರ್ಷಗಳ ನಂತರ ಪಾಕಿಸ್ತಾನವು ವಿಶ್ವಕಪ್ ಸಹ-ಆತಿಥ್ಯ ವಹಿಸುವ ಹಕ್ಕು ಕಳೆದುಕೊಂಡಿತು. ಆ ದಾಳಿಗಳ ನಂತರ ಭದ್ರತಾ ಕಾಳಜಿಗಳು ಮುಂದುವರೆದವು.

2004 ರಲ್ಲಿ ಶ್ರೀಲಂಕಾ ಮತ್ತು ಜಿಂಬಾಬ್ವೆ ಒಳಗೊಂಡ ತ್ರಿಕೋನ ಸರಣಿಯನ್ನು ದೇಶವು ಕೊನೆಯದಾಗಿ ಆಯೋಜಿಸಿತ್ತು.

1996 ರ ವಿಶ್ವಕಪ್ ನಂತರ ದೇಶದಲ್ಲಿ ನಡೆದ ಮೊದಲ ಐಸಿಸಿ ಪಂದ್ಯಾವಳಿಯಾದ ಎಂಟು ರಾಷ್ಟ್ರಗಳ ಚಾಂಪಿಯನ್ಸ್ ಟ್ರೋಫಿಗೆ ಈ ತ್ರಿಕೋನ ಸರಣಿಯು ಸಿದ್ಧತೆಯಾಗಲಿದೆ ಎಂದು ಹೊಸದಾಗಿ ಆಯ್ಕೆಯಾದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

‘ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ತ್ರಿಕೋನ ಸರಣಿಯು ರೋಮಾಂಚನಕಾರಿ ಆಗಲಿದೆ ಮತ್ತು ಬಹಳ ಸಮಯದ ನಂತರ ಪಾಕಿಸ್ತಾನವು ಇಂತಹ ಪಂದ್ಯಾವಳಿಯನ್ನು ಆಯೋಜಿಸಲಿದೆ’ ಎಂದು ನಖ್ವಿ ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.