ಬುಧವಾರ, ಏಪ್ರಿಲ್ 1, 2020
19 °C
ಪಂದ್ಯ ಆರಂಭವಾಗಿ ನಾಲ್ಕು ದಿನವಾದರೂ, ನಡೆದದ್ದು 91.5 ಓವರ್‌ಗಳ ಆಟವಷ್ಟೇ

ದಶಕಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್: ಚಾರಿತ್ರಿಕ ಪಂದ್ಯಕ್ಕೆ ಮಳೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾವಲ್ಪಿಂಡಿ: ದಶಕದ ಬಳಿಕ ಪಾಕಿಸ್ತಾನ ‌ನೆಲದಲ್ಲಿ ಆರಂಭವಾಗಿರುವ ಐತಿಹಾಸಿಕ ಟೆಸ್ಟ್‌ನ ನಾಲ್ಕನೇ ದಿನದಾಟವನ್ನು ಮಳೆಯಿಂದಾಗಿ ರದ್ದು ಮಾಡಲಾಗಿದೆ. ಎರಡು ಮತ್ತು ಮೂರನೇ ದಿನದಾಟಕ್ಕೂ ಮಳೆ ಅಡ್ಡಿಪಡಿಸಿದ್ದರಿಂದ ಬಹುತೇಕ ಪಂದ್ಯವೇ ಕೊಚ್ಚಿಹೋದಂತಾಗಿದೆ.

ಇಲ್ಲಿ ಬುಧವಾರ ಆರಂಭವಾದ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಪ್ರವಾಸಿ ಶ್ರೀಲಂಕಾ ತಂಡ ಮೊದಲ ದಿನ 68.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸಿತ್ತು. ಎರಡನೇ ದಿನದಿಂದಾಚೆಗೆ ಮಳೆಯ ಆಟ ಶುರುವಾಯಿತು. 2ನೇ ದಿನ ಕೇವಲ 18.2 ಓವರ್‌ ಆಟ ಮಾತ್ರವೇ ನಡೆಯಿತು. ಮೂರನೇ ದಿನ ಹವಾಮಾನ ವೈಪರೀತ್ಯದಿಂದಾಗಿ ಕೇವಲ 5.2 ಓವರ್‌ಗಳ ಆಟವಷ್ಟೇ ಸಾಧ್ಯವಾಗಿತ್ತು.

ಶುಕ್ರವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಮೈದಾನದಲ್ಲಿ ನೀರು ನಿಂತಿದ್ದು, ನಾಲ್ಕನೇ ದಿನದಾಟವನ್ನು ರದ್ದುಪಡಿಸಲಾಗಿದೆ. ಹೀಗಾಗಿ ಕೇವಲ 91.5 ಓವರ್‌ಗಳ ಆಟವಷ್ಟೇ ನಡೆದಿದೆ.

2009ರಲ್ಲಿ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್‌ ಮೇಲೆ ಇಸ್ಲಾಮಾಬಾದ್‌ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕ್‌ ಪ್ರವಾಸ ಕೈಗೊಳ್ಳಲು ಬೇರೆ ದೇಶದ ಆಟಗಾರರು ಹಿಂದೇಟು ಹಾಕಿದ್ದರು. ಹೀಗಾಗಿ ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆಯಾಗಿರಲಿಲ್ಲ. ಪಾಕಿಸ್ತಾನ ತಂಡವೂ ತಟಸ್ಥ ಸ್ಥಳಗಳಲ್ಲಿಯೇ ಪಂದ್ಯ ಆಡಬೇಕಾಗಿತ್ತು.

ಎರಡನೇ ಹಾಗೂ ಅಂತಿಮ ಪಂದ್ಯವು ಡಿ. 19–13ರವರೆಗೆ ಕರಾಚಿಯಲ್ಲಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು