ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ | ಪಾಕ್ ಮಹಿಳಾ ತಂಡದ ಕೋಚ್‌ಗೆ ಕೊಕ್

Last Updated 5 ಜೂನ್ 2020, 19:45 IST
ಅಕ್ಷರ ಗಾತ್ರ

ಕರಾಚಿ: ಮಹಿಳಾ ತಂಡದ ಮುಖ್ಯ ಕೋಚ್ ಇಕ್ಬಾಲ್ ಇಮಾಮ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಶುಕ್ರವಾರ ಹೊರದಬ್ಬಿದೆ.

ಬಿಸ್ಮಾ ಮಹರೂಫ್ ಅವರ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸಿರುವ ಮಂಡಳಿ ಒಂಬತ್ತು ಆಟಗಾರ್ತಿಯರನ್ನು ಕೇಂದ್ರ ಗುತ್ತಿಗೆಗೆ ಒಳಪಡಿಸಿದ್ದು ಒಂಬತ್ತು ಮಂದಿಯನ್ನು ಉದಯೋನ್ಮುಖ ಪ್ರತಿಭೆಗಳ ಪಟ್ಟಿಗೆ ಸೇರಿಸಿದೆ. ‘ಎ’ ದರ್ಜೆಯ ಆಟಗಾರ್ತಿಯರ ವೇತನದಲ್ಲಿ ಶೇಕಡಾ 33ರ ಹೆಚ್ಚಿಸಿ ‘ಬಿ’ ಮತ್ತು ‘ಸಿ’ ದರ್ಜೆಯವರ ವೇತನವನ್ನು ಕ್ರಮವಾಗಿ ಶೇಕಡಾ 30 ಮತ್ತು ಶೇಕಡಾ 25ರಷ್ಟು ಹೆಚ್ಚಿಸಿದೆ.

‘ಮಹಿಳಾ ಕ್ರಿಕೆಟ್‌ ಬೆಳೆಸುವ ಉದ್ದೇಶದಿಂದ ಮತ್ತು ಉದಯೋನ್ಮುಖ ಆಟಗಾರ್ತಿಯರನ್ನು ಪ್ರೋತ್ಸಾಹಿಸುವ ಉದ್ದೇಶಿಂದ ಪಂದ್ಯ ಶುಲ್ಕ ಹೆಚ್ಚಿಸುವ ಹಾಗೂ ದೇಶಿ ಟೂರ್ನಿಗಳ ಪ್ರಶಸ್ತಿ ಮೊತ್ತವನ್ನು ಶೇಕಡಾ 100ರಷ್ಟು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದೇಶಿ ಟೂರ್ನಿಗಳಲ್ಲಿ ಆಡುವವರ ದಿನಭತ್ಯೆಯನ್ನು ಶೇಕಡಾ 50ರಷ್ಟು ಹೆಚ್ಚಿಸಲಾಗುವುದು’ ಎಂದು ಮಂಡಳಿ ತಿಳಿಸಿದೆ.

ಐದು ತಾಸುಗಳಿಗೂ ಹೆಚ್ಚು ದೂರದ ಪ್ರಯಾಣ ಕೈಗೊಳ್ಳುವ ಸಂದರ್ಭದಲ್ಲಿ ಪಾಕಿಸ್ತಾನ ರಾಷ್ಟ್ರೀಯ ಮಹಿಳಾ ತಂಡಕ್ಕೆ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ಸೌ ಲಭ್ಯ ಒದಗಿಸಲಾಗುತ್ತಿದೆ. ಅದನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

15, 16 ವರ್ಷದ ಆಟಗಾರ್ತಿಯರು: ಮಂಡಳಿಯ ಉದಯೋನ್ಮುಖ ಆಟಗಾರ್ತಿಯರ ಪಟ್ಟಿಯಲ್ಲಿ 15 ವರ್ಷದ ಆಯೆಷಾ ನಸೀಮ್, 16 ವರ್ಷದ ಸಯೆದಾ ಅರೂಬ್ ಶಾ ಕೂಡ ಇದ್ದಾರೆ. 22 ವರ್ಷದವರಾದ ಮುನೀಬಾ ಅಲಿ ಸಿದ್ದಿಕಿ, ಫಾತಿಮಾ ಸನಾ, ಕೈನತ್ ಹಫೀಜ್, ನಜೀಹಾ ಆಲ್ವಿ, ರಮೀನ್ ಶಮೀಮ್, ಸಾಬಾ ನಜೀರ್ ಮತ್ತು ಸಾದಿಯಾ ಇಕ್ಬಾಲ್ ಪಟ್ಟಿಯಲ್ಲಿರುವ ಇತರ ಆಟಗಾರ್ತಿಯರು.

ಕೇಂದ್ರ ಗುತ್ತಿಗೆಯ ‘ಎ’ ದರ್ಜೆಯಲ್ಲಿ ಬಿಸ್ಮಾ ಮರೂಫ್ ಮತ್ತು ಜವೇರಿಯಾ ಖಾನ್ ಇದ್ದು ‘ಬಿ’ ದರ್ಜೆಯಲ್ಲಿ ಅಲಿಯಾ ರಿಯಾಜ್, ಡಯಾನಾ ಬೇಗ್ ಮತ್ತು ಸಿದ್ರಾ ನವಾಜ್, ‘ಸಿ’ ದರ್ಜೆಯಲ್ಲಿ ಅನಾಮ್ ಅಮೀನ್, ನಹೀದಾ ಖಾನ್, ನಿದಾ ದಾರ್‌ ಮತ್ತು ಒಮೈಮಾ ಸೊಹೈಲ್ ಸ್ಥಾನ ಗಳಿಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರಿದ ಸಾಮರ್ಥ್ಯ, ಫಿಟ್‌ನೆಸ್ ಮತ್ತಿತರ ಮಾನದಂಡಗಳ ಆಧಾರದಲ್ಲಿ ಈ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥೆ ಉರೂಜ್ ಮುಮ್ತಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT