ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ವರ್ಷದ ಟೆಸ್ಟ್‌ ಕ್ರಿಕೆಟ್‌ ತಂಡ: ಪಂತ್‌ಗೆ ಸ್ಥಾನ

ಐಸಿಸಿ ಏಕದಿನ ತಂಡದಲ್ಲಿ ಸಿರಾಜ್‌, ಅಯ್ಯರ್
Last Updated 24 ಜನವರಿ 2023, 14:20 IST
ಅಕ್ಷರ ಗಾತ್ರ

ದುಬೈ: ಭಾರತದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಅವರು ಐಸಿಸಿ ಪ್ರಕಟಿಸಿರುವ 2022ರ ಸಾಲಿನ ‘ವರ್ಷದ ಟೆಸ್ಟ್‌ ಕ್ರಿಕೆಟ್‌ ತಂಡ’ದಲ್ಲಿ ಸ್ಥಾನ ಪಡೆದಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಮತ್ತು ಮೊಹಮ್ಮದ್‌ ಸಿರಾಜ್‌ ಅವರಿಗೆ ಐಸಿಸಿ ಏಕದಿನ ತಂಡದಲ್ಲಿ ಅವಕಾಶ ದೊರೆತಿದೆ.

ಪಂತ್ ಅವರು ಕಳೆದ ವರ್ಷ ಆಡಿದ್ದ 12 ಇನಿಂಗ್ಸ್‌ಗಳಲ್ಲಿ 61.81ರ ಸರಾಸರಿಯಲ್ಲಿ 680 ರನ್‌ ಕಲೆ ಹಾಕಿದ್ದರು. ಎರಡು ಶತಕ ಮತ್ತು ನಾಲ್ಕು ಅರ್ಧಶತಕ ಗಳಿಸಿದ್ದರು. ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ನೇತೃತ್ವದ ಟೆಸ್ಟ್‌ ತಂಡದಲ್ಲಿ ಭಾರತದ ಬೇರೆ ಯಾರಿಗೂ ಸ್ಥಾನ ಲಭಿಸಿಲ್ಲ.

ಕಳೆದ ಋತುವಿನಲ್ಲಿ ತೋರಿದ್ದ ಉತ್ತಮ ಪ್ರದರ್ಶನವು ಅಯ್ಯರ್‌ ಮತ್ತು ಸಿರಾಜ್‌ ಅವರಿಗೆ ವರ್ಷದ ಏಕದಿನ ತಂಡದಲ್ಲಿ ಸ್ಥಾನ ದೊರಕಿಸಿಕೊಟ್ಟಿದೆ.

ಅಯ್ಯರ್‌ ಅವರು 17 ಪಂದ್ಯಗಳಿಂದ 55.69ರ ಸರಾಸರಿಯಲ್ಲಿ 724 ರನ್‌ ಪೇರಿಸಿದ್ದಾರೆ. 15 ಪಂದ್ಯಗಳಲ್ಲಿ ಆಡಿದ್ದ ಸಿರಾಜ್‌ 24 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಏಕದಿನ ತಂಡವನ್ನು ಮುನ್ನಡೆಸುವ ಗೌರವ ಪಾಕಿಸ್ತಾನದ ಬಾಬರ್‌ ಅಜಂ ಅವರಿಗೆ ದೊರೆತಿದೆ.

‘ವರ್ಷದ ಮಹಿಳಾ ಏಕದಿನ ತಂಡ’ದಲ್ಲಿ ಭಾರತದ ಸ್ಮೃತಿ ಮಂದಾನಾ, ಹರ್ಮನ್‌ಪ್ರೀತ್‌ ಕೌರ್‌ ಮತ್ತು ರೇಣುಕಾ ಸಿಂಗ್‌ ಅವರಿಗೆ ಸ್ಥಾನ ದೊರೆತಿದೆ.

ಐಸಿಸಿ ಟೆಸ್ಟ್‌ ತಂಡ: ಬೆನ್‌ ಸ್ಟೋಕ್ಸ್‌ (ನಾಯಕ), ಉಸ್ಮಾನ್‌ ಖವಾಜಾ, ಕ್ರೇಗ್‌ ಬ್ರಾಥ್‌ವೇಟ್, ಮಾರ್ನಸ್‌ ಲಾಬುಶೇನ್, ಬಾಬರ್ ಅಜಂ, ಜಾನಿ ಬೆಸ್ಟೋ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಪ್ಯಾಟ್‌ ಕಮಿನ್ಸ್, ಕಗಿಸೊ ರಬಾಡ, ನೇಥನ್‌ ಲಿಯೊನ್, ಜೇಮ್ಸ್‌ ಆ್ಯಂಡರ್ಸನ್.

ಐಸಿಸಿ ಏಕದಿನ ತಂಡ: ಬಾಬರ್‌ ಅಜಂ (ನಾಯಕ), ಟ್ರ್ಯಾವಿಸ್‌ ಹೆಡ್, ಶಾಯ್ ಹೋಪ್, ಶ್ರೇಯಸ್‌ ಅಯ್ಯರ್‌, ಟಾಮ್‌ ಲಥಾಮ್ (ವಿಕೆಟ್‌ ಕೀಪರ್‌), ಸಿಕಂದರ್ ರಜಾ, ಮೆಹ್ದಿ ಹಸನ್ ಮಿರಾಜ್, ಅಲ್ಜರಿ ಜೋಸೆಫ್, ಮೊಹಮ್ಮದ್‌ ಸಿರಾಜ್, ಟ್ರೆಂಟ್‌ ಬೌಲ್ಟ್‌, ಆ್ಯಡಂ ಜಂಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT