ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅಮೋಘ ಲಯದಲ್ಲಿರುವ ಇಂಗ್ಲೆಂಡ್‌ನ ಬ್ಯಾಟರ್ ಜೋಸ್ ಬಟ್ಲರ್, 600 ರನ್‌ಗಳ ಸಾಧನೆ ಮಾಡಿದ್ದಾರೆ.

ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ ಬಟ್ಲರ್, 11ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:IPL 2022 PBKS vs RR: ಬೆಸ್ಟೊ ಅರ್ಧಶತಕ; ರಾಜಸ್ಥಾನ್ಗೆ 190 ರನ್ ಗುರಿ

ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ವೇಗದಲ್ಲಿ 600 ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ (2016ರಲ್ಲಿ), ಡೇವಿಡ್ ವಾರ್ನರ್ (2019), ಶಾನ್ ಮಾರ್ಷ್ (2008) ಹಾಗೂ ಕ್ರಿಸ್ ಗೇಲ್ (2011) ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಲ್ಲದೆ ಐಪಿಎಲ್ ಸೀಸನ್‌ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಬ್ಯಾಟರ್ ಎನಿಸಿದ್ದಾರೆ.

ಐಪಿಎಲ್ 2022ರಲ್ಲಿ ಅತಿ ಹೆಚ್ಚು ರನ್ ಗಳಿಸಿದ (ಆರೆಂಜ್ ಕ್ಯಾಪ್) ಬ್ಯಾಟರ್‌ಗಳ ಸಾಲಿನಲ್ಲಿ ಬಟ್ಲರ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

11 ಇನ್ನಿಂಗ್ಸ್‌ಗಳಲ್ಲಿ ಬಟ್ಲರ್, 61.80ರ ಸರಾಸರಿಯಲ್ಲಿ 618 ರನ್ ಗಳಿಸಿದ್ದಾರೆ. 152.21ರ ಸ್ಟ್ರೈಕ್‌ರೇಟ್ ಕಾಪಾಡಿಕೊಂಡಿರುವ ಅವರು, ತಲಾ ಮೂರು ಶತಕ ಹಾಗೂ ಅರ್ಧಶತಕಗಳನ್ನು ಗಳಿಸಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ 10 ಪಂದ್ಯಗಳಲ್ಲಿ 451 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.