ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಿಯಾಗೆ 5 ವಿಕೆಟ್: ಭಾರತ ‘ಎ’ ತಂಡಕ್ಕೆ ಜಯ; ಸರಣಿ ಗೆದ್ದ ಆಸ್ಟ್ರೇಲಿಯಾ

Published : 18 ಆಗಸ್ಟ್ 2024, 13:38 IST
Last Updated : 18 ಆಗಸ್ಟ್ 2024, 13:38 IST
ಫಾಲೋ ಮಾಡಿ
Comments

ಮ್ಯಾಕೆ, ಆಸ್ಟ್ರೇಲಿಯಾ: ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಲೆಗ್‌ಸ್ಪಿನ್ನರ್ ಪ್ರಿಯಾ ಮಿಶ್ರಾ ಅವರ ಬಲದಿಂದ ಭಾರತ ಎ ಮಹಿಳೆಯರ ತಂಡವು ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಜಯಿಸಿತು. 

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ  ಎ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತೇಜಲ್ ಹಸಬನಿಸ್ (50; 60ಎ) ಮತ್ತು ರಾಘವಿ ಬಿಷ್ತ್  (53; 64ಎ) ಅವರಿಬ್ಬರ ಅರ್ಧಶತಕಗಳ ಬಲದಿಂದ ಭಾರತ ಎ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 243 ರನ್‌ ಗಳಿಸಿತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ಎ ತಂಡವು 22.1 ಓವರ್‌ಗಳಲ್ಲಿ 72 ರನ್‌ಗಳಿಗೆ ಕುಸಿಯಲು ಪ್ರಿಯಾ ಮಿಶ್ರಾ (14ಕ್ಕೆ5) ಕಾರಣರಾದರು. ಇದರೊಂದಿಗೆ ಭಾರತ ಎ ತಂಡವು 171 ರನ್‌ಗಳ ಜಯಸಾಧಿಸಿತು. ಆದರೆ ಮೊದಲೆರಡೂ ಪಂದ್ಯಗಳಲ್ಲಿ ಜಯಿಸಿದ್ದ  ಆತಿಥೇಯ ಬಳಗವು 2–1ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು. ಟಿ20 ಸರಣಿಯಲ್ಲಿಯೂ ಆತಿಥೇಯರು ಮೇಲುಗೈ ಸಾಧಿಸಿದ್ದರು. 

ಪ್ರಿಯಾ ಮಿಶ್ರಾ ಅವರಿಗೆ ಇದು ಚೊಚ್ಚಲ ಪಂದ್ಯವಾಗಿದೆ. ಅವರು ಆಸ್ಟ್ರೇಲಿಯಾ ಎ ತಂಡದ ಆರಂಭಿಕ ಬ್ಯಾಟರ್‌ ಮ್ಯಾಡಿ ಡಾರ್ಕಿ (22 ರನ್) ಮತ್ತು ಅಗ್ರಮಾನ್ಯ ಬ್ಯಾಟರ್ ಟೆಸ್ ಫ್ಲಿಂಟಾಫ್ (20 ರನ್) ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ತಂಡವು 22 ಓವರ್‌ಗಳಲ್ಲಿ 52 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು. 

ನಂತರದ ಹಂತದಲ್ಲಿ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಆಡಲಿಲ್ಲ. ಪ್ರಿಯಾ ಅವರಿಗೆ ಉತ್ತಮ ಜೊತೆ ನೀಡಿದ ಮಿನು ಮಣಿ ಕೂಡ 2 ವಿಕೆಟ್‌ಗಳನ್ನು ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಭಾರತ ಎ: 50 ಓವರ್‌ಗಳಲ್ಲಿ  9ಕ್ಕೆ243 (ತೇಜಲ್ ಹಸಬನಿಸ್ 50, ರಾಘವಿ ಬಿಷ್ತ್ 53, ಸಜೀವನ್ ಸಂಜನಾ 40, ಮಿನು ಮಣಿ 34, ಮೈತ್ಲಾನ್ ಬ್ರೌನ್ 39ಕ್ಕೆ3, ಚಾರ್ಲಿ ನಾಟ್ 26ಕ್ಕೆ2) ಆಸ್ಟ್ರೇಲಿಯಾ ಎ: 22.1 ಓವರ್‌ಗಳಲ್ಲಿ 72 (ಪ್ರಿಯಾ ಮಿಶ್ರಾ 14ಕ್ಕೆ5, ಮಿನು ಮಣಿ 4ಕ್ಕೆ2) ಫಲಿತಾಂಶ: ಭಾರತ  ಎ ತಂಡಕ್ಕೆ 171 ರನ್‌ಗಳ ಜಯ. ಸರಣಿಯಲ್ಲಿ ಆಸ್ಟ್ರೇಲಿಯಾ ಎ ತಂಡಕ್ಕೆ 2–1ರ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT