ಶುಕ್ರವಾರ, ಮಾರ್ಚ್ 31, 2023
22 °C

IPL 2023: ಪಂಜಾಬ್‌ ಕಿಂಗ್ಸ್‌ಗೆ ಸುನಿಲ್ ಜೋಶಿ ಸ್ಪಿನ್ ಬೌಲಿಂಗ್‌ ಕೋಚ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ಸುನೀಲ್ ಜೋಶಿ ಅವರು ಐಪಿಎಲ್‌ ಕ್ರಿಕೆಟ್‌ ಫ್ರಾಂಚೈಸ್‌ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.

‘ಭಾರತ ತಂಡದ ಮಾಜಿ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು ತಂಡದ ಸ್ಪಿನ್ ಬೌಲಿಂಗ್ ಕೋಚ್‌ ಆಗಿ ಘೋಷಿಸಲು ಸಂತಸ ಎನಿಸುತ್ತದೆ‘ ಎಂದು ಪಂಜಾಬ್‌ ಕಿಂಗ್ಸ್‌ನ ಟ್ವಿಟರ್‌ ಖಾತೆಯಲ್ಲಿ ತಿಳಿಸಲಾಗಿದೆ.

52 ವರ್ಷದ ಸುನೀಲ್ ಅವರು 1996–2001ರ ಅವಧಿಯಲ್ಲಿ ಭಾರತ ತಂಡದ ಪರ 15 ಟೆಸ್ಟ್‌ ಮತ್ತು 69 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದರು.

ಶಿಖರ್ ಧವನ್ ನಾಯಕತ್ವದ ಪಂಜಾಬ್‌ ತಂಡಕ್ಕೆ ವಾಸೀಂ ಜಾಫರ್ ಬ್ಯಾಟಿಂಗ್ ಕೋಚ್‌, ಚಾರ್ಲ್‌ ಲಾಂಗ್‌ವೆಲ್ಟ್‌ ಬೌಲಿಂಗ್ ಕೋಚ್‌ ಮತ್ತು ಬ್ರಾಡ್‌ ಹಡಿನ್‌ ಸಹಾಯಕ ತರಬೇತುದಾರ ಆಗಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು