ಸೋಮವಾರ, ಜೂನ್ 14, 2021
22 °C

ಧೋನಿಗೆ ಅವರೇ ಸಾಟಿ: ಗಣ್ಯರ ಭಾವಪರವಶ ಸಂದೇಶಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶನಿವಾರ ಸಂಜೆ 7.30ಕ್ಕೆ ಮಹೇಂದ್ರಸಿಂಗ್ ಧೋನಿಯ ನಿವೃತ್ತಿ ವಿಷಯ ಪ್ರಕಟವಾದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನ ಸಂಚಾರವಾಯಿತು.

ದೇಶ–ವಿದೇಶಗಳ ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳ ಭಾವಪರವಶ ಸಂದೇಶಗಳಿಂದ ಸಾಮಾಜಿಕ ಜಾಲತಾಣಗಳು ತುಂಬಿಹೋದವು. ಅದರಲ್ಲಿ ಆಯ್ದ ಕೆಲವು ಇಲ್ಲಿವೆ;

***

ಮಹೇಂದ್ರಸಿಂಗ್ ಧೋನಿ ನಿಮ್ಮ ಕ್ರಿಕೆಟ್‌ ಜೀವನ ಅಪ್ರತಿಮವಾದದ್ದು. 2011ರಲ್ಲಿ ನಿಮ್ಮ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭವಾಗಲಿ. ನಿಮ್ಮ ಎರಡನೇ ಇನಿಂಗ್ಸ್‌ಗೂ..

–ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ

***

‌ದೇಶಕ್ಕೆ ನೀವು ನೀಡಿರುವ ಕಾಣಿಕೆಗಳು ಪ್ರತಿಯೊಬ್ಬರ ಹೃದಯದಲ್ಲಿ ಹಸಿರಾಗಿರಲಿವೆ.  ಆದರೆ, ನೀವು ನನಗೆ ತೋರಿಸಿದ ಗೌರವ, ‍‍‍ಪ್ರೀತಿ, ವಿಶ್ವಾಸಗಳನ್ನು ಮರೆಯಲು ಸಾಧ್ಯವೇ ಇಲ್ಲ. ಜಗತ್ತು ನಿಮ್ಮ ಕ್ರಿಕೆಟ್ ಸಾಧನೆ ನೋಡಿದೆ. ನಾನು ನಿಮ್ಮ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿದ್ದೇನೆ.

–ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

***

ಧೋನಿ ವಿದಾಯದಿಂದ ಬಹಳ ದೊಡ್ಡ ಜಾಗ ಖಾಲಿಯಾಗಿದೆ. ಅದನ್ನು ತುಂಬುವವರು ಯಾರು? ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಿಮ್ಮ ವ್ಯಕ್ತಿತ್ವ, ಅಂಗಳದಲ್ಲಿ ನಿಮ್ಮ ವೃತ್ತಿಪರತೆಯನ್ನು ಹತ್ತಿರದಿಂದ ನೋಡುವ ಸೌಭಾಗ್ಯ ನನ್ನದಾಗಿತ್ತು. 

– ರವಿಶಾಸ್ತ್ರಿ, ಭಾರತ ತಂಡದ ಮುಖ್ಯ ಕೋಚ್

***

ಎಂ.ಎಸ್. ಧೋನಿಯಂತಹ  ಆಟಗಾರ ಹಿಂದೆ ಯಾರೂ ಇರಲಿಲ್ಲ. ಈಗಲೂ ಇಲ್ಲ, ಮುಂದೆಯೂ ಬರುವುದಿಲ್ಲ. ಅವರಿಗೆ ಅವರೇ ಸಾಟಿ.

–ವೀರೇಂದ್ರ ಸೆಹ್ವಾಗ್, ಕ್ರಿಕೆಟಿಗ

***

ಅವರು ನಿವೃತ್ತಿ ಘೋಷಣೆಯ ನಿರ್ಧಾರ ಅಚ್ಚರಿ ಮೂಡಿಸಿದೆ.  ನಮಗೆ ಯಾವುದೇ ರೀತಿಯ ಸುಳಿವೂ ಇರಲಿಲ್ಲ.

–ಕಾಶಿ ವಿಶ್ವನಾಥ, ಚೆನ್ನೈ ಸೂಪರ್ ಕಿಂಗ್ಸ್‌ ಸಿಇಒ

***

ಕ್ರಿಕೆಟ್‌ನ ಕಥೆಯು ಧೋನಿಯ ಅಧ್ಯಾಯವಿಲ್ಲದೇ ಸಂಪೂರ್ಣವಾಗಲು ಸಾಧ್ವವೇ ಇಲ್ಲ. 

–ಶೋಯಬ್ ಅಖ್ತರ್, ಪಾಕಿಸ್ತಾನ ಕ್ರಿಕೆಟಿಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು