ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ENG vs IND | ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ಅಶ್ವಿನ್; ಐಸಿಸಿ ತಿಂಗಳ ಆಟಗಾರ

Last Updated 9 ಮಾರ್ಚ್ 2021, 16:23 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಫೆಬ್ರುವರಿ ತಿಂಗಳ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ಈಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅವರ ಆಲ್‌ರೌಂಡ್ ಆಟ ರಂಗೇರಿತ್ತು.

ಹೋದ ತಿಂಗಳು ಅವರು ಆಡಿದ ಮೂರು ಟೆಸ್ಟ್‌ಗಳಲ್ಲಿ 24 ವಿಕೆಟ್‌ ಗಳಿಸಿದ್ದರು. ಒಟ್ಟು 176 ರನ್ ಗಳಿಸಿದರು. ಅದರಲ್ಲಿ ಒಂದು ಶತಕ ಕೂಡ ಬಾರಿಸಿದ್ದರು. ಅಹಮದಾಬಾದಿನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ನಲ್ಲಿ ಅವರು 400 ವಿಕೆಟ್‌ಗಳ ಮೈಲುಗಲ್ಲು ಕೂಡ ದಾಟಿದ್ದರು.

ಈ ಸರಣಿಯಲ್ಲಿ ಭಾರತ ತಂಡವು 3–1ರಿಂದ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶಿಸಲು ಮಹತ್ವದ ಕಾಣಿಕೆ ನೀಡಿದರು.

ತಿಂಗಳ ಆಟಗಾರ ಸ್ಪರ್ಧೆಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ (333 ರನ್ ಮತ್ತು ಆರು ವಿಕೆಟ್‌) ಮತ್ತು ಪದಾರ್ಪಣೆ ಟೆಸ್ಟ್‌ನಲ್ಲಿಯೇ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದ ವೆಸ್ಟ್‌ ಇಂಡೀಸ್‌ ತಂಡದ ಯುವ ಆಟಗಾರ ಕೈಲ್ ಮೆಯರ್ಸ್ ಇದ್ದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ವಿಂಡೀಸ್‌ ಬಳಗವು 395 ರನ್‌ಗಳ ಗುರಿ ಸಾಧಿಸಿ ಜಯಿಸಲು ಅವರ ದ್ವಿಶತಕ ಕಾರಣವಾಗಿತ್ತು. ಈ ಪೈಪೋಟಿಯಲ್ಲಿ ಚೆನ್ನೈನ ಅಶ್ವಿನ್ ಮೇಲುಗೈ ಸಾಧಿಸಿದರು.

ಮಹಿಳೆಯ ವಿಭಾಗದಲ್ಲಿ ಇಂಗ್ಲೆಂಡ್‌ನ ಟಾಮಿ ಬೀಮೌಂಟ್ ಗೌರವಕ್ಕೆ ಪಾತ್ರರಾದರು.

ಹೋದ ತಿಂಗಳು ಅವರು ನ್ಯೂಜಿಲೆಂಡ್ ಎದುರಿನ ಮೂರು ಏಕದಿನ ಪಂದ್ಯಗಳಲ್ಲಿ ಒಟ್ಟು 231 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT