ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಕ್ರಿಕೆಟ್‌: ರಾಜ್ಯ ತಂಡದಲ್ಲಿ ರಾಹುಲ್‌, ಮಯಂಕ್‌

Last Updated 13 ಸೆಪ್ಟೆಂಬರ್ 2021, 22:03 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಎಲ್‌.ರಾಹುಲ್, ಮಯಂಕ್‌ ಅಗರವಾಲ್ ಮತ್ತು ದೇವದತ್ತ ಪಡಿಕ್ಕಲ್ ಅವರು ಸೈಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಗಾಗಿ ಆಯ್ಕೆ ಮಾಡಿರುವ ರಾಜ್ಯದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಒಟ್ಟು 35 ಆಟಗಾರರ ಪಟ್ಟಿಯನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿದೆ.

ರಾಹುಲ್, ಮಯಂಕ್ ಮತ್ತು ದೇವದತ್ತ ಕ್ರಮವಾಗಿ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌, ಜವಾ‌ನ್ಸ್‌ ಕ್ರಿಕೆಟ್ ಕ್ಲಬ್ ಮತ್ತು ಕೇಂಬ್ರಿಜ್ ಕ್ರಿಕೆಟ್ ಕ್ಲಬ್‌ಗಳನ್ನು ಪ್ರತಿನಿಧಿಸುತ್ತಿದ್ದಾರೆ. ಜವಾನ್ಸ್ ಕ್ರಿಕೆಟ್ ಕ್ಲಬ್‌ನ ಮನೀಷ್ ಪಾಂಡೆ, ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌ನ ಅಭಿಮನ್ಯು ಮಿಥುನ್‌, ಅನಿರುದ್ಧ ಜೋಶಿ, ಕರುಣ್ ನಾಯರ್‌, ಜೆ.ಸುಚಿತ್‌, ಪ್ರವೀಣ್ ದುಬೆ, ರೋನಿತ್ ಮೋರೆ, ಸ್ವಸ್ತಿಕ್ ಯೂನಿಯನ್‌ನ ಆರ್‌.ಸಮರ್ಥ್‌, ಕೆ.ಗೌತಮ್‌, ಶ್ರೇಯಸ್ ಗೋಪಾಲ್‌, ಮಾಡರ್ನ್ ಸಿಸಿಯ ಮೊಹಮ್ಮದ್ ಆಖಿಬ್‌, ಬೆಂಗಳೂರು ಯುನೈಟೆಡ್‌ನ ರೋಹನ್ ಕದಂ, ಮೌಂಟ್ ಜಾಯ್ ಕ್ಲಬ್‌ನ ಪ್ರಸಿದ್ಧ ಕೃಷ್ಣ ಕೂಡ ಆಯ್ಕೆಯಾಗಿದ್ದಾರೆ.

ಪಟ್ಟಿಯಲ್ಲಿರುವ ಇತರ ಆಟಗಾರರು: ರೋಹನ್ ಪಾಟೀಲ್, ಮನೋಜ್ ಭಾಂಡಗೆ, ಕುಶಾಲ್ ವಾಧ್ವಾನಿ (ಸರ್ ಸೈಯದ್), ಅಭಿನವ್ ಮನೋಹರ್‌ (ಬೆಂಗಳೂರು ಯುನೈಟೆಡ್‌), ಕೆ.ವಿ.ಸಿದ್ಧಾರ್ಥ್, ಪ್ರತೀಕ್ ಜೈನ್‌ (ಸ್ವಸ್ತಿಕ್ ಯೂನಿಯನ್‌), ಕೆ.ಸಿ.ಕಾರ್ಯಪ್ಪ (ಜವಾಹರ್‌), ಶ್ರೀಜಿತ್ ಕೆ.ಎಲ್‌, ದರ್ಶನ್ ಎಂ.ಬಿ, ವಿಕೆಟ್ ಕೀಪರ್ ಬಿ.ಆರ್.ಶರತ್ (ವಲ್ಚರ್ಸ್‌ನ),ಆದಿತ್ಯ ಸೋಮಣ್ಣ (ಮೌಂಟ್‌ ಜಾಯ್‌), ವಿದ್ಯಾಧರ ಪಾಟೀಲ, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್‌ (ಬೆಂಗಳೂರು ಯುನೈಟೆಡ್‌), ನಿಹಾಲ್ ಉಳ್ಳಾಲ್, ನಿಶ್ಚಿತ್ ರಾವ್ (ರಾಜಾಜಿನಗರ ಕ್ರಿಕೆಟರ್ಸ್‌), ಶುಭಾಂಗ್ ಹೆಗ್ಡೆ (ಕೇಂಬ್ರಿಜ್‌), ವೈಶಾಖ್‌ ವಿಜಯಕುಮಾರ್, ಅನೀಶ್ ಕೆ.ವಿ (ಸೋಷಿಯಲ್ ಕ್ರಿಕೆಟರ್ಸ್‌).

ಕೋಚ್‌: ಯರೇಗೌಡ, ಬೌಲಿಂಗ್ ಕೋಚ್‌: ಎಸ್.ಅರವಿಂದ್‌, ಫೀಲ್ಡಿಂಗ್ ಕೋಚ್‌: ದೀಪಕ್ ಚೌಗುಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT