ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನ ರಾಯಲ್ಸ್: ಕ್ರಿಕೆಟ್‌ ನಿರ್ದೇಶಕರಾಗಿ ಸಂಗಕ್ಕಾರ ನೇಮಕ

Last Updated 24 ಜನವರಿ 2021, 13:27 IST
ಅಕ್ಷರ ಗಾತ್ರ

ನವದೆಹಲಿ: ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರು ಐಪಿಎಲ್‌ ಫ್ರಾಂಚೈಸ್‌ ರಾಜಸ್ತಾನ ರಾಯಲ್ಸ್ ತಂಡದ ಕ್ರಿಕೆಟ್‌ ಚಟುವಟಿಕೆಗಳ ನಿರ್ದೇಶಕರಾಗಿ ಭಾನುವಾರ ನೇಮಕಗೊಂಡಿದ್ದಾರೆ.

ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ (ಎಂಸಿಸಿ) ಅಧ್ಯಕ್ಷರೂ ಆಗಿರುವ ಸಂಗಕ್ಕಾರ, ರಾಜಸ್ತಾನ ತಂಡದ ತರಬೇತಿ ರೂಪುರೇಷೆ, ಹರಾಜು ಯೋಜನೆಗಳು, ಕಾರ್ಯತಂತ್ರ, ಪ್ರತಿಭಾ ಶೋಧ, ನಾಗ್ಪುರದಲ್ಲಿರುವ ರಾಯಲ್ಸ್ ಅಕಾಡೆಮಿಯ ಬೆಳವಣಿಗೆ ಮತ್ತಿತರ ಚಟುವಟಿಕೆಗಳ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಮುಂಬರುವ ಐಪಿಎಲ್ ಟೂರ್ನಿಗೆ ಸಂಜು ಸ್ಯಾಮ್ಸನ್ ರಾಜಸ್ತಾನ ರಾಯಲ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಈ ಮೊದಲು ಸ್ಟೀವ್ ಸ್ಮಿತ್ ಈ ಸ್ಥಾನದಲ್ಲಿದ್ದರು.

‘ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಆಗಿರುವ ಸಂಗಕ್ಕಾರ ಅವರು ನಮ್ಮೊಂದಿಗಿರುವುದು ಹೆಮ್ಮೆ ಎನಿಸುತ್ತದೆ. ಕ್ರಿಕೆಟ್‌ ಮತ್ತು ಅದರಾಚೆಗೂ ಅವರು ಮಹಾನ್ ವ್ಯಕ್ತಿತ್ವವುಳ್ಳವರು‘ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಸಂಗಕ್ಕಾರ ಶ್ರೀಲಂಕಾ ತಂಡದ ಪರ ಎಲ್ಲ ಮಾದರಿಗಳೂ ಸೇರಿ 28,000ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT