ಶುಕ್ರವಾರ, ಫೆಬ್ರವರಿ 26, 2021
20 °C

IPL-2020 | RR vs KKR: ರಾಜಸ್ಥಾನ ತಂಡಕ್ಕೆ ನಿರ್ಣಾಯಕ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ‘ಮಾಡು ಇಲ್ಲವೇ ಮಡಿ’ ಸ್ಥಿತಿಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಸೆಣಸಲಿದೆ.

ಚೆನ್ನೈ ಎದುರಿನ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್ ಸೋತು, ಇಲ್ಲಿ ರಾಜಸ್ಥಾನ ಗೆದ್ದರೆ 14 ಪಾಯಿಂಟ್ಸ್‌ನೊಂದಿಗೆ ಪ್ಲೇಆಫ್‌ ಕದ ತಟ್ಟುವ ಸಣ್ಣ ಅವಕಾಶ ವೊಂದಿದೆ. ತನ್ನ ಕಳೆದ  ಎರಡು ಪಂದ್ಯ ಗಳಲ್ಲಿ ಜಯಿಸುವ ಮೂಲಕ ಸ್ಟೀವನ್ ಸ್ಮಿತ್ ಬಳಗವು ಈ ಅವಕಾಶವನ್ನು ಜೀವಂತವಾಗಿಟ್ಟುಕೊಂಡಿದೆ. 

ರನ್‌ರೇಟ್‌ ಸರಾಸರಿಯಲ್ಲಿ ಕಿಂಗ್ಸ್ ಮತ್ತು ರಾಯಲ್ಸ್ ತಂಡಕ್ಕಿಂತ ಹಿಂದಿರುವ ಕೋಲ್ಕತ್ತ ತಂಡವು ಪ್ಲೇ ಆಫ್‌ ಹಾದಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ಇದರಿಂದಾಗಿ ಕೋಲ್ಕತ್ತ ತಂಡವು ಗೆದ್ದರೆ  ಕೂದಲೆಳೆಯಷ್ಟು ಪ್ರಮಾಣದ ಅವಕಾಶ ಇರಲಿದೆ. ರಾಯಲ್ಸ್, ಕೆಕೆಆರ್ ಮತ್ತು ಕಿಂಗ್ಸ್ ತಲಾ 12 ಪಾಯಿಂಟ್ಸ್‌ ಹೊಂದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು