ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೂ ಅಂ.ರಾ ಪಂದ್ಯ ಆಡದ ಆಟಗಾರನನ್ನು ಕೊಹ್ಲಿ–ಬಾಬರ್‌ಗೆ ಹೋಲಿಸಿದ ಪಾಕ್ ಮಾಜಿ ನಾಯಕ

Last Updated 20 ಮಾರ್ಚ್ 2020, 9:24 IST
ಅಕ್ಷರ ಗಾತ್ರ

ನವದಹೆಲಿ:ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌, ಡೇವಿಡ್ ವಾರ್ನರ್, ಪಾಕಿಸ್ತಾನದಬಾಬರ್‌ ಅಜಂ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್‌ ಸದ್ಯ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆಂದು ಗುರುತಿಸಿಕೊಂಡಿದ್ದಾರೆ. ಕೆ.ಎಲ್‌.ರಾಹುಲ್‌ (ಭಾರತ) ಹಾಗೂ ಮಾರ್ನಸ್‌ ಲಾಬುಶೇನ್‌ (ಆಸಿಸ್)ಅವರ ಸಾಲಿಗೆ ಸೇರಿಕೊಳ್ಳುವ ಸೂಚನೆ ನೀಡಿದ್ದಾರೆ. ಪಾಕಿಸ್ತಾನದ ಯುವ ಕ್ರಿಕೆಟಿಗ ಹೈದರ್‌ ಅಲಿ ಕೂಡ ಈ ಸಾಲಿಗೆ ಸೇರಬಲ್ಲ ಆಟಗಾರಎಂದು ಆ ದೇಶದ ಮಾಜಿ ನಾಯಕ ರಮೀಜ್‌ ರಾಜಾ ಹೇಳಿದ್ದಾರೆ.

ವೀಕ್ಷಕ ವಿವರಣೆಗಾರರೂ ಆಗಿರುವರಾಜಾತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿದ್ದು, ‘ಹೈದರ್ ಕೂಡ ಅಸಾಧಾರಣ ಪ್ರತಿಭೆ ಹೊಂದಿದ್ದಾರೆ. ಇದೇ ಮೊದಲ ಸಲ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್‌ಎಲ್‌) ಆಡುತ್ತಿದ್ದರೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಆದಾಗ್ಯೂ ಅವರು ಸ್ಥಿರತೆ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದ್ದಾರೆ.

‘ಹೈದರ್‌, ಕೊಹ್ಲಿ ಮತ್ತು ಬಾಬರ್‌ ಅವರನ್ನು ಹಿಂಬಾಲಿಸಬೇಕಿದೆ. ಅಘಾದ ಪ್ರತಿಭೆ ಹೊಂದಿರುವ ಅವರಿಬ್ಬರೂ ಅತ್ಯಂತ ಭರವಸೆಯೊಂದಿಗೆ ಬ್ಯಾಟಿಂಗ್ ಮಾಡುತ್ತಾರೆ. ಅಂತಹದೇಪ್ರತಿಭೆಯನ್ನು ಹೈದರ್ ಅವರೂ ಹೊಂದಿದ್ದಾರೆ. ಜೊತೆಗೆದೀರ್ಘ ಇನಿಂಗ್ಸ್‌ ಆಡುವುದನ್ನು ಕಲಿಯಬೇಕಾಗಿದೆ’ ಎಂದು ಸಲಹೆ ನೀಡಿದ್ದಾರೆ.

ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡದ ಹೈದರ್‌ ಸದ್ಯ ಪಿಎಸ್‌ಎಲ್‌ನಲ್ಲಿ ಪೇಶಾವರ್‌ಜಲ್ಮಿ ತಂಡದ ಪರ ಆಡುತ್ತಿದ್ದಾರೆ. ಈ ಬಾರಿ ಆಡಿರುವ 9 ಪಂದ್ಯಗಳಿಂದ239 ರನ್‌ ಗಳಿಸಿದ್ದಾರೆ. ಸೆಮಿಫೈನಲ್‌ ಹಂತಕ್ಕೆ ಸಲುಪಿರುವ ಟೂರ್ನಿಯನ್ನ ಕೋವಿಡ್‌–19 ಭೀತಿಯಿಂದಾಗಿ ಅರ್ಧದಲ್ಲೇ ನಿಲ್ಲಿಸಲಾಗಿದೆ.

ಮೊದಲ ಸೆಮಿಫೈನಲ್‌ನಲ್ಲಿಮುಲ್ತಾನ್‌ ಸುಲ್ತಾನ್ಸ್ ಹಾಗೂ ಪೇಶಾವರ್‌ ಜಲ್ಮಿ, ಎರಡನೇಸೆಮಿಫೈನಲ್‌ನಲ್ಲಿ ಕರಾಚಿ ಕಿಂಗ್ಸ್‌ ಹಾಗೂ ಲಾಹೋರ್‌ ಕ್ವಲಂಡರ್ಸ್‌ ತಂಡಗಳು ಸೆಣಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT