IPL 2023: ವಿಲ್ ಜಾಕ್ಸ್ ಬದಲಿಗೆ ಬ್ರೇಸ್‌ವೆಲ್ ಹೆಸರು ಪ್ರಕಟಿಸಿದ ಆರ್‌ಸಿಬಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂಬರುವ ಆವೃತ್ತಿಯಲ್ಲಿ ಇಂಗ್ಲೆಂಡ್ ತಂಡದ ಹೊಸಪ್ರತಿಭೆ ವಿಲ್ ಜಾಕ್ಸ್ ಅವರ ಬದಲಿಗೆ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಕಣಕ್ಕಿಳಿಯಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸ್ ಶನಿವಾರ ಪ್ರಕಟಿಸಿದೆ.
ಇತ್ತೀಚೆಗೆ ಬಾಂಗ್ಲಾ ಪ್ರವಾಸದ ವೇಳೆ ವಿಲ್ ಜಾಕ್ಸ್ ಅವರು ಗಾಯಗೊಂಡಿದ್ದರು. ಇದೀಗ ಅವರ ಬದಲಿಗೆ ಬ್ರೇಸ್‌ವೆಲ್ ಆಡಲಿದ್ದಾರೆ ಎಂದು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, ಗಾಯಗೊಂಡಿರುವ ವಿಲ್ ಜಾಕ್ಸ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.
ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸ್ ಜಾಕ್ಸ್‌ರನ್ನು ₹3.2 ಕೋಟಿಗೆ ಖರೀದಿಸಿತ್ತು.
32 ವರ್ಷ ವಯಸ್ಸಿನ ನ್ಯೂಜಿಲೆಂಡ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಟಿ20 ಸರಣಿಯಲ್ಲಿ ಕಿವೀಸ್‌ನ ಅಗ್ರ ವಿಕೆಟ್ ಟೇಕರ್ ಆಗಿದ್ದರು. ಇತ್ತೀಚೆಗೆ ಭಾರತ ವಿರುದ್ಧ ಏಕದಿನ ಪಂದ್ಯದಲ್ಲಿ 140 ರನ್ ಗಳಿಸಿ ಗಮನ ಸೆಳೆದಿದ್ದರು.
ಮೈಕೆಲ್ ಬ್ರೇಸ್‌ವೆಲ್ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ರಚಿನ್ ರವೀಂದ್ರ ಅವರನ್ನು ಆಯ್ಕೆ ಮಾಡಿ ನ್ಯೂಜಿಲೆಂಡ್ ಕ್ರಿಕೆಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಬಹುನಿರೀಕ್ಷಿತ ಐಪಿಎಲ್ ಟೂರ್ನಿಯು ಮಾರ್ಚ್ 31ರಂದು ಆರಂಭವಾಗಲಿದೆ.
ಓದಿ...
ಎಬಿಡಿ, ಕ್ರಿಸ್ ಗೇಲ್ ಜೆರ್ಸಿ ಸಂಖ್ಯೆಗೆ ನಿವೃತ್ತಿ ಘೋಷಿಸಲಿರುವ ಆರ್‌ಸಿಬಿ
ಐಪಿಎಲ್ ಮಿನಿ ಹರಾಜು: ಆರ್‌ಸಿಬಿಯಲ್ಲಿರುವ ಎಲ್ಲ ಆಟಗಾರರ ಪಟ್ಟಿ ಇಲ್ಲಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.