ಲಖನೌ: ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಲಖನೌ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ಗೆ ಬಿಸಿಸಿಐ ₹ 12 ಲಕ್ಷ ದಂಡ ವಿಧಿಸಿದೆ.
.IPL 2025 | CSK vs DC: ಋತುರಾಜ್ಗೆ ಗಾಯ, ಧೋನಿ ಸಾರಥ್ಯ?.
ಬೌಲಿಂಗ್ ತಂಡವು 20 ಓವರ್ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಆದರೆ ಎಲ್ಎಸ್ಜಿ ನಿಗದಿತ ಸಮಯಕ್ಕಿಂತ ಒಂದು ಓವರ್ ಹಿಂದಿತ್ತು. ಹೀಗಾಗಿ 19 ನೇ ಓವರ್ ಬಳಿಕ ಅವರು 30-ಗಜ ವೃತ್ತದ ಹೊರಗೆ ಒಬ್ಬ ಫೀಲ್ಡರ್ ಅನ್ನು ಕಡಿಮೆ ಇಡಬೇಕಾಯಿತು.

‘ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಪರಿಚ್ಚೇದ 2.22ರ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ರಿಷಭ್ ಪಂತ್ಗೆ ₹12 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ.
.IPL: ಆಟದ ಮೇಲೆ ಗಮನ, ಕಿರುಚಾಟದ ಮೇಲಲ್ಲ; ಕೊಹ್ಲಿ ಗುರಿಯಾಗಿಸಿ ಗಿಲ್ ಪೋಸ್ಟ್?.
ಏತನ್ಮಧ್ಯೆ, ಐಪಿಎಲ್ನ ಲೆವೆಲ್-1 ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಎಲ್ಎಸ್ಜಿಯ ಬೌಲರ್ ದಿಗ್ವೇಶ್ ರಾಠಿಗೆ ಸತತ ಎರಡನೇ ಬಾರಿಗೆ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ. ನೋಟ್ಬುಕ್ ಆಚರಣೆ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಸಂಭ್ರಮಾಚರಣೆ ಮಾಡಿ ದಂಡ ತೆತ್ತಿದ್ದರು.
.IPL 2025 | LSG vs PBKS: ನೋಟ್ಬುಕ್ ಸೆಲೆಬ್ರೇಷನ್ ಮಾಡಿದ ರಾಠಿಗೆ ದಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.