ಲಖನೌ: ಐಪಿಎಲ್ ಅಂಗಳದಲ್ಲಿ ಆಟಗಾರರ ಸಂಭ್ರಮಾಚರಣೆಗಳಿಗೆ ದಂಡದ ಬರೆ ಬಿದ್ದಿದೆ. ಇದೀಗ ಮಂಗಳವಾರ ನಡೆದ ಪಂದ್ಯದಲ್ಲಿ ಲಖನೌ ತಂಡದ ದಿಗ್ವೇಶ್ ರಾಠಿಗೂ ದಂಡ ಹಾಕಲಾಗಿದೆ.

ಇಲ್ಲಿನ ಏಕಾನ ಕ್ರೀಡಾಂಗಣದಲ್ಲಿ ಪಂಜಾಬ್ ಮತ್ತು ಲಖನೌ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ರಾಠಿ ನೋಟ್ಬುಕ್ ಸೆಲೆಬ್ರೇಷನ್ ಮಾಡಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ನ ಕೆಸ್ರಿಕ್ ವಿಲಿಯಮ್ಸ್ ಶುರು ಮಾಡಿದ್ದ ಈ ಸೆಲೆಬ್ರೇಷನ್ ಈಗ ಐಪಿಎಲ್ನಲ್ಲಿ ಕಾಣಿಸಿಕೊಂಡಿದೆ.

ಈ ಸಂಭ್ರಮಾಚರಣೆ ಮಾಡಿದ್ದಕ್ಕೆ ರಾಠಿಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಸದ್ಯ ಒಂದು ಡಿಮೆರಿಟ್ ಪಾಯಿಂಟ್ ಪಡೆದಿರುವ ದಿದಿಗ್ವೇಶ್ ರಾಠಿಗೆ ಮೂರು ವರ್ಷದೊಳಗೆ 4 ಡಿಮೆರಿಟ್ ಪಾಯಿಂಟ್ ಪಡೆದರೆ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಇಂತಹದೊಂದು ನಿಯಮ ಪರಿಚಯಿಸುವ ಮೂಲಕ ಐಪಿಎಲ್ ಸಮಿತಿ ಆಟಗಾರರಲ್ಲಿ ಶಿಸ್ತು ಮೂಡಿಸಲು ಮುಂದಾಗಿದೆ.

ಈ ಹಿಂದೆ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ನಿತೀಶ್ ರಾಣಾ, ಹೃತಿಕ್ ಶೊಕೀನ್ ಕೂಡ ಮೈದಾನದಲ್ಲಿ ಜಗಳವಾಡಿಕೊಂಡಿದ್ದರು. ಈ ಸಾಲಿಗೆ ದಿಗ್ವೇಶ್ ರಾಠಿ, ಪ್ರಿಯಾಂಶ್ ಆರ್ಯ ಸೇರಿದ್ದಾರೆ.
.IPL 2025 | LSG vs PBKS: ಲಖನೌ ಎದುರು 8 ವಿಕೆಟ್ಗಳ ಜಯ ಸಾಧಿಸಿದ ಪಂಜಾಬ್.IPL 2025 RCB vs GT | ಬೆಂಗಳೂರು: ಸಂಚಾರ ಮಾರ್ಗ ಬದಲು, ಮೆಟ್ರೊ ಸೇವೆ ವಿಸ್ತರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.