ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದ ಗೆಲುವಿನ ಬಳಿಕ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್, ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ ಪೋಸ್ಟ್ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.

'ಆಟದ ಮೇಲೆ ಗಮನ, ಕಿರುಚಾಟದ ಮೇಲಲ್ಲ' ಎಂದು ಗಿಲ್ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದರು. ಯಾವ ಆಟಗಾರನನ್ನು ಗುರಿಯಾಗಿಸಿ ಗಿಲ್ ಪೋಸ್ಟ್ ಮಾಡಿದ್ದರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅಭಿಮಾನಿಗಳಂತೂ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು, ಆರ್ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಗುರಿಯಾಗಿಸಿ ಗಿಲ್ ಪೋಸ್ಟ್ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭುವನೇಶ್ವರ್ ಕುಮಾರ್ ದಾಳಿಯಲ್ಲಿ ಶುಭಮನ್ ಗಿಲ್ ವಿಕೆಟ್ ಪತನದ ವೇಳೆ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಆ ಮೂಲಕ ಸ್ಟಾರ್ ಆಟಗಾರನಿಗೆ 'ಸೆಂಡ್ ಆಫ್' ನೀಡಿದ್ದರು. ಇದಕ್ಕೆ ಪ್ರತಿಯಾಗಿ ಗಿಲ್ ಮಾರ್ಮಿಕ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳು ಗಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಟೀಮ್ ಇಂಡಿಯಾದ 'ಓವರ್ರೇಟಡ್ ಆಟಗಾರ' ಎಂದು ಕೆಣಕಿದ್ದಾರೆ.

ಮತ್ತೊಂದೆಡೆ ಪೋಸ್ಟ್ಗೆ ಸಂಬಂಧಿಸಿದಂತೆ ಗಿಲ್ ಈವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗುಜರಾತ್ ಎಂಟು ವಿಕೆಟ್ ಅಂತರದ ಜಯ ಗಳಿಸಿತ್ತು. ಆ ಮೂಲಕ ಸತತ ಎರಡು ಗೆಲುವಿನ ಬಳಿಕ ಆರ್ಸಿಬಿ ಟೂರ್ನಿಯಲ್ಲಿ ಮೊದಲ ಸೋಲಿಗೆ ಶರಣಾಗಿತ್ತು.
.IPL 2025: ಕೊಹ್ಲಿಗೆ ಬೌಲಿಂಗ್ ಮಾಡಲು ಹಿಂಜರಿದ ಸಿರಾಜ್; ಕಾರಣ ಏನು?.IPL 2025 RCB vs GT | ಸಿರಾಜ್ ಬಿರುಗಾಳಿ: ಬಟ್ಲರ್ ಸಿಡಿಲಬ್ಬರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.