ಶನಿವಾರ, ಮೇ 15, 2021
24 °C
ಇಂಗ್ಲೆಂಡ್‌ಗೆ ಆರಂಭಿಕ ಆಘಾತ

IND vs ENG: ಧವನ್‌, ಪಂತ್‌ ಅರ್ಧ ಶತಕ, ಇಂಗ್ಲೆಂಡ್‌ಗೆ 330 ರನ್‌ ಟಾರ್ಗೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ಇಂಗ್ಲೆಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 329 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿದೆ.

ಶಿಖರ್‌ ಧವನ್‌ (67), ರಿಷಬ್‌ ಪಂತ್‌ (78), ಹಾರ್ದಿಕ್‌ ಪಾಂಡ್ಯ (64) ಅವರ ಸ್ಫೋಟಕ ಆಟದ ನೆರವಿನಿಂದ ಆಂಗ್ಲರಿಗೆ 330 ರನ್‌ಗಳ ಗುರಿ ನೀಡಿದೆ.

ಮತ್ತೆ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತದ ಪರ ಶಿಖರ್‌ ಧವನ್‌– ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಿ ಉತ್ತಮ ಜೊತೆಯಾಟವಾಡಿದರು.

ಇಂಗ್ಲೆಂಡ್‌ ಪರ ಮಾರ್ಕ್ ವುಡ್ 3, ಆದಿಲ್ ರಶೀದ್ 2, ಸ್ಯಾಮ್‌ ಕರನ್‌, ರೀಸ್ ಟಾಪ್ಲೆ, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಬೆನ್ ಸ್ಟೋಕ್ಸ್‌ ತಲಾ ಒಂದು ವಿಕೆಟ್‌ ಪಡೆದಿದ್ದಾರೆ.

ಇಂಗ್ಲೆಂಡ್‌ಗೆ ಆರಂಭಿಕ ಆಘಾತ: ಇಂಗ್ಲೆಂಡ್‌ ಪರ ಬ್ಯಾಟಿಂಗ್‌ ಆರಂಭಿಸಿದ ಜೇಸನ್ ರಾಯ್ 14, ಜಾನಿ ಬೆಸ್ಟೊ 1 ರನ್‌ ಗಳಿಸಿ ಭುವನೇಶ್ವರ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಸದ್ಯ ಬೆನ್ ಸ್ಟೋಕ್ಸ್‌,  ಡೇವಿಡ್ ಮಲಾನ್ ಕ್ರೀಸ್‌ನಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು