ಲಖನೌ: ನಾಯಕ ರಿಷಭ್ ಪಂತ್ (ಔಟಾಗದೇ 118, 61ಎಸೆತ) ಅವರು ಲೀಗ್ನ ಕೊನೆಯಲ್ಲಿ ಅಬ್ಬರಿಸಿ ಶತಕ ಹೊಡೆದರೂ ಅದು ಫಲ ನೀಡಲಿಲ್ಲ. ರಾಯಲ್ ಚಾಲೆಂಜರ್ಸ್ ಹಂಗಾಮಿ ನಾಯಕ ಜಿತೇಶ್ ಶರ್ಮಾ ಅವರ ಅಜೇಯ 85 ರನ್ಗಳ (33 ಎಸೆತ) ಆಟ ಆ ಶತಕಕ್ಕಿಂತ ಹೆಚ್ಚಿನ ತೂಕ ಪಡೆಯಿತು.

ಅವರ ಅಮೋಘ ಆಟದಿಂದ ಮಂಗಳವಾರ ನಡೆದ ಐಪಿಎಲ್ನ ಕೊನೆಯ ಲೀಗ್ ಪಂದ್ಯದಲ್ಲಿ ಬೆಂಗಳೂರು ತಂಡ ಆರು ವಿಕೆಟ್ಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಮೊದಲ ಕ್ವಾಲಿಫೈಯರ್ ಆಡುವ ಅವಕಾಶ ಪಡೆಯಿತು. ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದೇ 29ರಂದು ನಡೆಯುವ ಮೊದಲ ಕ್ವಾಲಿಫೈಯರ್ನಲ್ಲಿ ಎದುರಾಗಲಿವೆ. ಶುಕ್ರವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ.

ಏಕನಾ ಕ್ರೀಡಾಂಗಣದಲ್ಲಿ 228 ರನ್ಗಳ ದೊಡ್ಡ ಗುರಿಯನ್ನು ಎದುರಿಸಿದ್ದ ಆರ್ಸಿಬಿ ಒಂದು ಹಂತದಲ್ಲಿ, ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಾಗ 12ನೇ ಓವರಿನಲ್ಲಿ 4 ವಿಕೆಟ್ಗೆ 123 ರನ್ ಗಳಿಸಿತ್ತು. ಪಂದ್ಯ ಕುತೂಹಲಕರ ಘಟ್ಟಕ್ಕೆ ತಲುಪಿತ್ತು. ಆದರೆ ಮಯಂಕ್ ಅಗರವಾಲ್ (ಔಟಾಗದೇ 41) ಜೊತೆಗೂಡಿದ ಜಿತೇಶ್ ಆರಂಭದಿಂದಲೇ ಆಕ್ರಮಣಕ್ಕಿಳಿದು ಶತಕದ ಜೊತೆಯಾಟವಾಡಿದರು. ಇವರಿಬ್ಬರು ಕೇವಲ 46 ಎಸೆತಗಳಲ್ಲಿ 107 ರನ್ ಸಿಡಿಸಿದರು. 19ನೇ ಓವರಿನಲ್ಲಿ ಬದೋನಿ ಬೌಲಿಂಗ್ನಲ್ಲಿ ಚೆಂಡನ್ನು ಭರ್ಜರಿ ಸಿಕ್ಸರ್ಗೆತ್ತಿದ ಜಿತೇಶ್ ಇನ್ನೂ ಎಂಟು ಎಸೆತಗಳಿರುವಂತೆ ತಂಡವನ್ನು (4 ವಿಕೆಟ್ಗೆ 230) ಗುರಿತಲುಪಿಸಿ ಸಂಭ್ರಮಿಸಿದರು.

ಇದಕ್ಕೆ ಮೊದಲು ಕೊಹ್ಲಿ (54, 30 ಎಸೆತ) ಎಂಟನೇ ಅರ್ಧ ಶತಕ ಹೊಡೆದರು; ಮಾತ್ರವಲ್ಲ ಐದನೇ ಬಾರಿ ಋತುವಿನಲ್ಲಿ 600ಕ್ಕೂ ಹೆಚ್ಚು ರನ್ ಕಲೆಹಾಕಿದರು. ಫಿಲ್ ಸಾಲ್ಟ್ ಮತ್ತು ಕೊಹ್ಲಿ ಪವರ್ ಪ್ಲೇ ಅವಧಿಯೊಳಗೆ 61 ರನ್ ಸೇರಿಸಿ ಉತ್ತಮ ಬುನಾದಿ ಒದಗಿಸಿದರು. ವಿಲ್ ಓ ರೂರ್ಕಿ ಅವರು ಸತತ ಎಸೆತಗಳಲ್ಲಿ ರಜತ್ ಪಾಟೀದಾರ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ವಿಕೆಟ್ಗಳನ್ನು ಪಡೆದರು. ಆದರೆ ಅಂತಿಮವಾಗಿ ನ್ಯೂಜಿಲೆಂಡ್ನ ಬೌಲರ್ 74 ರನ್ ತೆತ್ತು ದುಬಾರಿಯೂ ಆದರು.

ಇನ್ನೊಂದು ಕಡೆ ತಂಡದ ರಕ್ಷಣೆಗೆ ನಿಂತಿದ್ದ ಕೊಹ್ಲಿ ಅವರು ನಿರ್ಗಮಿಸಿದಾಗ ಲಖನೌ ತಿರುಗಿಬೀಳುವಂತೆ ಕಂಡಿತ್ತು. ಆದರೆ ಜಿತೇಶ್ ಮತ್ತು ಮಯಂಕ್ ಈ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿದರು. ಲಖನೌ ತಂಡದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಜಿತೇಶ್ 22 ರನ್ ಗಳಿಸಿದ್ದಾಗ ರನ್ಔಟ್ನಿಂದ ಪಾರಾಗಿದ್ದರು. ಲಖನೌ ಬೌಲಿಂಗ್ ಕೂಡ ಕಳಾಹೀನವಾಯಿತು.

ಅಬ್ಬರಿಸಿದ ಪಂತ್:

ಇದಕ್ಕೆ ಮೊದಲು ಬ್ಯಾಟಿಂಗ್ಗೆ ಕಳಿಸಲ್ಪಟ್ಟ ಲಖನೌ ತಂಡ 3 ವಿಕೆಟ್ಗೆ 227 ರನ್ಗಳ ಒಳ್ಳೆಯ ಮೊತ್ತವನ್ನೇ ಗಳಿಸಿತ್ತು. ನಾಯಕ ರಿಷಭ್ ಪಂತ್ ಕೊನೆಗೂ ಲಯ ಕಂಡುಕೊಂಡು ಬಿರುಸಿನ ಶತಕ ಬಾರಿದರು. ಈ ಋತುವಿನುದ್ದಕ್ಕೂ ಆಕರ್ಷಕ ಆಟವಾಡಿರುವ ಮಿಚೆಲ್ ಮಾರ್ಷ್ ಮಿಂಚಿನ ಅರ್ಧ ಶತಕ ಸಿಡಿಸಿದರು.

ಮಾರ್ಷ್ (67, 37 ಎಸೆತ) ಮತ್ತು ಪಂತ್ ನಡುವೆ ಎರಡನೇ ವಿಕೆಟ್ಗೆ ಕೇವಲ 78 ಎಸೆತಗಳಲ್ಲಿ 152 ರನ್ಗಳು ಹರಿದುಬಂದವು. ಈ ಮೊದಲಿನ ಪಂದ್ಯಗಳಲ್ಲಿ ಪಂತ್ ಒಟ್ಟು 107 ರನ್ ಗಳಿಸಿದ್ದರು. ಆದರೆ ಇಲ್ಲಿ ಲಯ ಕಂಡುಕೊಂಡು ವಿಶ್ವಾಸದಿಂದ ಆಡಿದರು. ಭುವನೇಶ್ವರ ಕುಮಾರ್ ಮಾಡಿದ ಇನಿಂಗ್ಸ್ನ 18ನೇ ಓವರಿನ ಐದನೇ ಎಸೆತವನ್ನು ಎಂದಿನ ಶೈಲಿಯಲ್ಲಿ ಎಕ್ಸ್ಟ್ರಾ ಕವರ್ಮೇಲೆ ಬೌಂಡರಿ ಬಾರಿಸಿದ ಅವರು ಶತಕ ಪೂರೈಸಿದರು; ಹೆಲ್ಮೆಟ್, ಗ್ಲೌಸ್ ಕಳಚಿ ಅರೆಕ್ಷಣ ಮುಗಿಲಿನತ್ತ ನೋಡಿದರು. ಸಂಭ್ರಮ ತಡೆಯಲಾಗದೇ ಒಂದು ಲಾಗ ಹಾಕಿದರು.

ಕೆಲಕಾಲ ಮಾರ್ಷ್ ಒಂದಿಷ್ಟು ನಿಧಾನಗತಿಯಲ್ಲಿದ್ದಂತೆ ಕಂಡರು. ಮೊದಲ 16 ಎಸೆತಗಳಲ್ಲಿ 19 ರನ್ ಗಳಿಸಿದ್ದ ಅವರು ನಂತರ ರನ್ವೇಗ ಹೆಚ್ಚಿಸಿದರು. ಸುಯಶ್ ಶರ್ಮಾ ಬೌಲಿಂಗ್ನಲ್ಲಿ ಸಿಕ್ಸರ್ ಮೂಲಕ 31 ಎಸೆತಗಳಲ್ಲಿ ಅರ್ಧ ಶತಕ ದಾಟಿದರು.

ಆದರೆ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ (16ನೇ ಓವರ್) ಮತ್ತೊಂದು ದೊಡ್ಡ ಹೊಡೆತದ ಯತ್ನದಲ್ಲಿ ಅವರು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರಿಗೆ ಕ್ಯಾಚಿತ್ತರು.

18ನೇ ಓವರಿನಲ್ಲಿ ಅವರು ಶತಕ ಪೂರೈಸಿದರು. ಇನಿಂಗ್ಸ್ ಕೊನೆಯವರೆಗೂ ಆಟ ಉಳಿಸಿಕೊಂಡರು. ಪಂತ್ ಮತ್ತು ನಿಕೋಲಸ್ ಪೂರನ್ ನಡುವೆ ಮೂರನೇ ವಿಕೆಟ್ಗೆ 49 ರನ್ಗಳು ಬಂದವು.
.IPL 2025 | LSG vs RCB: ಮೊದಲ ಕ್ವಾಲಿಫೈಯರ್ಗೆ ಆರ್ಸಿಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.