ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND VS ENG| ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಪಂತ್‌: ದಾಖಲೆ ಸೃಷ್ಟಿ

ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಗೆದ್ದಿದ್ದು, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಸಡಿಸಿಕೊಂಡಿದೆ. ಈ ಪಂದ್ಯದಲ್ಲಿ ರಿಷಬ್‌ ಪಂತ್‌ ಏಕದಿನ ಕ್ರಿಕೆಟ್‌ನ ಚೊಚ್ಚಲ ಶತಕದ ಸಾಧನೆ ಮಾಡಿ ಸಂಭ್ರಮಿಸಿದರು.

‘ಎಮಿರೇಟ್ಸ್ ಓಲ್ಡ್ ಟ್ರಫರ್ಡ್‌’ ಅಂಗಳದಲ್ಲಿ ನಡೆದ ಪಂದ್ಯದಲ್ಲಿ 113 ಬಾಲ್‌ಗಳಲ್ಲಿ 2 ಸಿಕ್ಸರ್‌ನೊಂದಿಗೆ ಪಂತ್‌ 125ರನ್‌ ಗಳಿಸಿದರು. ಇದು, ಏಕದಿನ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ಸ್ಕೋರ್‌ ಕೂಡ.

ರಾಹುಲ್ ದ್ರಾವಿಡ್, ಕೆ.ಎಲ್‌ ರಾಹುಲ್‌ ನಂತರ ಏಷ್ಯಾದಿಂದ ಹೊರಗೆ, ವಿದೇಶಿ ನೆಲದಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ವಿಕೆಟ್‌ಕೀಪರ್ ಪಂತ್. ರಾಹುಲ್‌ ದ್ರಾವಿಡ್‌ 1999ರಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ್ದರು. 2020ರಲ್ಲಿ ಕೆ.ಎಲ್‌ ರಾಹುಲ್‌ ಅವರು ನ್ಯೂಜಿಲೆಂಡ್‌ನಲ್ಲಿ ಶತಕ ಗಳಿಸಿದ್ದರು. ಆ ಪಟ್ಟಿಗೆ ಈಗ ಪಂತ್‌ ಸೇರಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಸತತ ಎಂಟು ಅಂತಾರಾಷ್ಟ್ರೀಯ ಸರಣಿಗಳನ್ನು ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT