ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ರ್‍ಯಾಂಕಿಂಗ್: ಅಗ್ರ 10 ಬ್ಯಾಟರ್ ಪಟ್ಟಿಯಲ್ಲಿ ರೋಹಿತ್‌ ಶರ್ಮಾ

ಬೌಲರ್‌ಗಳ ವಿಭಾಗದಲ್ಲಿ ಅಶ್ವಿನ್ ಸ್ಥಾನ ಮತ್ತಷ್ಟು ಭದ್ರ
Published 19 ಜುಲೈ 2023, 14:09 IST
Last Updated 19 ಜುಲೈ 2023, 14:09 IST
ಅಕ್ಷರ ಗಾತ್ರ

ದುಬೈ: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 12 ವಿಕೆಟ್ ಪಡೆದಿದ್ದ ರವಿಚಂದ್ರನ್‌ ಅಶ್ವಿನ್‌  ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದಾರೆ.

ಡೊಮಿನಿಕಾದಲ್ಲಿ ಇತ್ತೀಚೆಗೆ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್‌ ಮೂರು ಸ್ಥಾನಗಳಷ್ಟು ಬಡ್ತಿ ಪಡೆದು 10ನೇ ಸ್ಥಾನದಲ್ಲಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ಅವರೇ ಹೆಚ್ಚಿನ ಕ್ರಮಾಂಕ ಪಡೆದಿದ್ದಾರೆ. ಮೊದಲ 9 ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಚೊಚ್ಚಲ ಟೆಸ್ಟ್‌ನಲ್ಲೇ 171 ರನ್ ಗಳಿಸಿ ಮಿಂಚಿದ್ದ 21 ವರ್ಷದ ಯಶಸ್ವಿ ಜೈಸ್ವಾಲ್ 420 ಪಾಯಿಂಟ್‌ಗಳೊಂದಿಗೆ 73ನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್‌ ಒಂದು ಸ್ಥಾನ ಕೆಳಕ್ಕಿಳಿದ 11ನೇ ಕ್ರಮಾಂಕದಲ್ಲಿದ್ದಾರೆ. ವಿರಾಟ್‌ ಕೊಹ್ಲಿ 711 ಪಾಯಿಂಟ್‌ಗಳೊಂದಿಗೆ 14ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ವೆಸ್ಟ್‌ ಇಂಡೀಸ್ ಕಡೆ, ಪದಾರ್ಪಣೆ ಟೆಸ್ಟ್‌ನಲ್ಲೇ ಗಮನ ಸೆಳೆದ ಅಲಿಕ್‌ ಅಥನೇಜ್‌ 77ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ಟೆಸ್ಟ್‌ನಲ್ಲಿ ಅಮೋಘ ಬೌಲಿಂಗ್ ಮಾಡಿದ ಅಶ್ವಿನ್‌ 884 ಪಾಯಿಂಟ್ಸ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಪ್ಯಾಟ್‌ ಕಮಿನ್ಸ್‌ (828) ಅವರಿಗಿಂತ 56 ರನ್‌ಗಳ ಉತ್ತಮ ಮುನ್ನಡೆ ಗಳಿಸಿದ್ದಾರೆ. ರವೀಂದ್ರ ಜಡೇಜಾ (779 ಪಾಯಿಂಟ್ಸ್‌) ಮೂರು ಸ್ಥಾನಗಳಷ್ಟು ಬಡ್ತಿ ಪಡೆದು ಏಳನೇ ಸ್ಥಾನಕ್ಕೇರಿದ್ದಾರೆ.

ಜಡೇಜಾ ಆಲ್‌ರೌಂಡರ್‌ಗಳ ವಿಭಾಗದಲ್ಲಿ 449 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅಶ್ವಿನ್‌ (362) ಎರಡನೇ ಸ್ಥಾನದಲ್ಲಿದ್ದಾರೆ.

ಟಿ–20 ಬೌಲರ್‌ಗಳ ವಿಭಾಗದಲ್ಲಿ ಬಾಂಗ್ಲಾದೇಶದ ರಶೀದ್ ಖಾನ್‌ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಬಾಂಗ್ಲಾ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್ ಮತ್ತು ಪಾಕ್‌ ವೇಗಿ ಶಾಹಿನ್‌ ಶಾ ಅಫ್ರೀದಿ (ತಲಾ 616  ಪಾಯಿಂಟ್‌) ಅವರು 16ನೇ ಸ್ಥಾನ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT