ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಿ ಬೌಲರ್‌ಗಳಲ್ಲಿ ಯಾರು ಕಠಿಣ?: ರೋಹಿತ್ ಉತ್ತರಕ್ಕೆ ನಗು ಬೀರಿದ ರಿತಿಕಾ

Published 8 ಆಗಸ್ಟ್ 2023, 10:36 IST
Last Updated 8 ಆಗಸ್ಟ್ 2023, 10:36 IST
ಅಕ್ಷರ ಗಾತ್ರ

ವಾಷಿಂಗ್ಟನ್: ಪಾಕಿಸ್ತಾನ ಕ್ರಿಕೆಟ್ ತಂಡದ ಯಾವ ಬೌಲರ್‌ ನಿಮಗೆ ಅತ್ಯಂತ ಕಠಿಣ ಎಂದೆನಿಸುತ್ತದೆ...? ಅಭಿಮಾನಿಯ ಈ ಪ್ರಶ್ನೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೀಡಿದ ಉತ್ತರ ಪ್ರೇಕ್ಷಕರನ್ನು ಮಾತ್ರವಲ್ಲ, ಸ್ವತಃ ಪತ್ನಿ ರಿತಿಕಾ ಸಜ್ದೇಶ್ ಅವರನ್ನೂ ನಗೆಗಡಲಿನಲ್ಲಿ ತೇಲಿಸಿತು.

ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ರೋಹಿತ್ ಶರ್ಮಾ, 2–1 ಅಂತರದಲ್ಲಿ ಸರಣಿ ಗೆದ್ದು ಬೀಗುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಸ್ವತಃ ತಾವೇ ವಿಶ್ರಾಂತಿ ಪಡೆದು ಸುದ್ದಿಯಲ್ಲಿದ್ದಾರೆ. ಬಿಡುವಿನ ನಡುವೆ ಪತ್ನಿ ರಿತಿಕಾ ಜತೆ ಅಮೆರಿಕ ಪ್ರವಾಸದಲ್ಲಿದ್ದಾರೆ.

ಪ್ರವಾಸದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, ‘ನಿಮಗೆ ಕಷ್ಟವೆನಿಸುವ ಪಾಕಿಸ್ತಾನದ ಬೌಲರ್ ಯಾರು?’ ಪ್ರಶ್ನೆಗೆ ಉತ್ತರಿಸಿದ ರೋಹಿತ್, ‘ಪಾಕಿಸ್ತಾನ ತಂಡದಲ್ಲಿ ಎಲ್ಲರೂ ಉತ್ತಮರು. ಆದರೆ ನಾನು ಯಾರೊಬ್ಬರ ಹೆಸರನ್ನೂ ಹೇಳುವುದಿಲ್ಲ. ಅದರಿಂದ ದೊಡ್ಡ ವಿವಾದವೇ ಸೃಷ್ಟಿಯಾಗಬಹುದು’ ಎಂದಿದ್ದಾರೆ.

‘ಒಬ್ಬರ ಹೆಸರು ತೆಗೆದುಕೊಂಡರೆ, ಮತ್ತೊಬ್ಬರಿಗೆ ಬೇಸರ, ಮತ್ತೊಬ್ಬರ ಹೆಸರು ಹೇಳಿದರೆ ಮಗದೊಬ್ಬರಿಗೆ ಇಷ್ಟವಾಗುವುದಿಲ್ಲ. ಎಲ್ಲರೂ ಉತ್ತಮರೇ’ ಎಂದಿದ್ದಾರೆ. ಪತಿಯ ಜಾಣ್ಮೆಯ ಉತ್ತರಕ್ಕೆ ಪತ್ನಿ ರಿತಿಕಾ ನಗು ಚೆಲ್ಲುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಸ್ಟ್‌ ಇಂಡೀಸ್ ವಿರುದ್ಧದ ಟಿ–20 ಸರಣಿಗೆ ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ, ಹಾರ್ದಿಕ್ ಪಾಂಡ್ಯಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಟ್ಟು 5 ಪಂದ್ಯಗಳಲ್ಲಿ ಭಾರತ ತಂಡ 0–2ರಿಂದ ಹಿಂದಿದೆ. ಮಂಗಳವಾರ ಗಯಾನಾದಲ್ಲಿ ನಡೆಯಲಿರುವ 3ನೇ ಟಿ–20 ಪಂದ್ಯಕ್ಕೆ ಎರಡೂ ತಂಡಗಳು ಮುಖಾಮುಖಿಯಾಗಲಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT