ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL–2023 | ಯುಪಿ ವಾರಿಯರ್ಸ್‌ ಎದುರು ಬ್ಯಾಟಿಂಗ್, ಆರ್‌ಸಿಬಿಗೆ ಮೊದಲ ಜಯದ ತವಕ

Last Updated 10 ಮಾರ್ಚ್ 2023, 16:13 IST
ಅಕ್ಷರ ಗಾತ್ರ

ಮುಂಬೈ: ಸ್ಮೃತಿ ಮಂದಾನ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು, ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಇಂದು ಯುಪಿ ವಾರಿಯರ್ಸ್‌ ವಿರುದ್ಧ ಕಣಕ್ಕಿಳಿದಿದೆ. ಟಾಸ್‌ ಗೆದ್ದಿರುವ ಆರ್‌ಸಿಬಿ, ಬ್ಯಾಟಿಂಗ್‌ ಆಯ್ದುಕೊಂಡಿದೆ.

ಇಲ್ಲಿನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಬೆಂಗಳೂರು ತಂಡ ಆಡಿರುವ ಮೊದಲ ಮೂರು ಪಂದ್ಯಗಳಲ್ಲಿಯೂ ಮುಗ್ಗಿರಿಸಿದೆ. ಹೀಗಾಗಿ, ನಾಕೌಟ್‌ ಹಂತಕ್ಕೇರಲು ಮುಂದಿನ ಎಲ್ಲ ಪಂದ್ಯಗಳಲ್ಲಿಯೂ ಜಯ ಗಳಿಸಬೇಕಾದ ಒತ್ತಡದಲ್ಲಿದೆ.

ಇತ್ತ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ನಾಯಕತ್ವದ ಯುಪಿ ತಂಡ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಮತ್ತು ಸೋಲು ಕಂಡಿದ್ದು, ಜಯದ ಓಟ ಮುಂದುವರಿಸುವ ತವಕದಲ್ಲಿದೆ.

ಆಡುವ ಹನ್ನೊಂದರ ಬಳಗ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು:
ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್‌, ರಿಚಾ ಘೋಷ್‌, ಹೆಥರ್ ನೈಟ್‌, ಎಲೈಸ್‌ ಪೆರಿ, ಎರಿನ್‌ ಬರ್ನ್ಸ್‌, ಶ್ರೇಯಾಂಕಾ ಪಾಟಿಲ್‌, ರೇಣುಕಾ ಠಾಕೂರ್‌, ಕನಿಖಾ ಅಹುಜಾ, ಸಹನಾ ಪವಾರ್‌, ಕೋಮಲ್‌ ಝಂಝಾದ್‌

ಯುಪಿ ವಾರಿಯರ್ಸ್‌: ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಶೆರಾವತ್, ಕಿರನ್ ನವಗಿರೆ, ತಹಿಲಾ ಮೆಕ್‌ಗ್ರಾಥ್‌, ದೀಪ್ತಿ ಶರ್ಮಾ, ಗ್ರೇಸ್‌ ಹ್ಯಾರಿಸ್‌, ದೇವಿಕಾ ವೈದ್ಯಾ, ಸಿಮ್ರಾನ್‌ ಶೇಕ್‌, ಸೋಫಿ ಎಕ್ಲೆಸ್ಟೋನ್‌, ಅಂಜಲಿ ಸರ್ವಾನಿ, ರಾಜೇಶ್ವರಿ ಗಾಯಕವಾಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT